×
Ad

ಮಂಗಳೂರು: ಸಲಫಿ ಮದ್ರಸ ಪರೀಕ್ಷೆಯ ಫಲಿತಾಂಶ

Update: 2018-05-04 21:09 IST

ಮಂಗಳೂರು, ಮೇ 4: ಕರ್ನಾಟಕ ಸಲಫಿ ಎಸೋಸಿಯೇಷನ್ , ಮಂಗಳೂರು ಇದರ ಅಧೀನ ಸಂಸ್ಥೆ ಕೆ.ಎಸ್.ಎ ಶಿಕ್ಷಣ ಮಂಡಳಿಯ ಅಧೀನದಲ್ಲಿ ನಡೆದ ಐದನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.

ಶುಂಠಿಕೊಪ್ಪ ಸಲಫಿ ಮದ್ರಸದ ವಿದ್ಯಾರ್ಥಿನಿ ಶಮ್‌ನಾರ್ ಆರ್ ಪ್ರಥಮ ರ್ಯಾಂಕ್, ಅಲ್ ಹಿಕ್ಮ ಇಸ್ಲಾಮಿಕ್ ಸ್ಕೂಲ್, ದೇರಳಕಟ್ಟೆಯ ವಿದ್ಯಾರ್ಥಿನಿ ಅಫ್ನಾನ್ ಫಾತಿಮ ದ್ವಿತೀಯ ರ್ಯಾಂಕ್, ಅಲ್ ಮನಾರ್ ಅರೇಬಿಕ್ ಮದ್ರಸ, ಉಳ್ಳಾಲದ ವಿದ್ಯಾರ್ಥಿನಿ ಖದೀಜಾ ಹನಿಯ್ಯ ತೃತೀಯ ರ್ಯಾಂಕ್, ಅಲ್ ಮದ್ರಸತುಲ್ ಇಸ್ಲಾಹಿಯ್ಯಾ, ಅಜ್ಜಿನಡ್ಕದ ವಿದ್ಯಾರ್ಥಿ ಮುಹಮ್ಮದ್ ಫಹದ್ ನಾಲ್ಕನೇ ರ್ಯಾಂಕ್ ಮತ್ತು ಶುಂಠಿಕೊಪ್ಪ ಸಲಫಿ ಮದ್ರಸದ ವಿದ್ಯಾರ್ಥಿನಿ ರಿಹಾ ಫಾತಿಮ ಐದನೇ ರ್ಯಾಂಕ್ ಪಡೆದಿದ್ದಾರೆ.

ಶುಂಠಿಕೊಪ್ಪ ಸಲಫಿ ಮದ್ರಸ, ಅಲ್ ಮದ್ರಸತುಲ್ ಇಸ್ಲಾಹಿಯ್ಯಾ, ಅಜ್ಜಿನಡ್ಕ ಮತ್ತು ಅಲ್ ಹಿಕ್ಮ ಇಸ್ಲಾಮಿಕ್ ಸ್ಕೂಲ್, ದೇರಳಕಟ್ಟೆ ಈ ಪರೀಕ್ಷೆಯಲ್ಲಿ ನೂರು ಶೇಕಡ ಫಲಿತಾಂಶ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News