×
Ad

ಹಣ ವಂಚನೆ ಪ್ರಕರಣ: ಎರಡು ವರ್ಷಗಳ ನಂತರ ಜಾಮೀನು ಪಡೆದ ಚಗನ್ ಭುಜ್ಬಲ್

Update: 2018-05-04 21:27 IST

ಮುಂಬೈ, ಮೇ.4: ಹಣ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಚಗನ್ ಭುಜ್ಬಲ್‌ಗೆ ಎರಡು ವರ್ಷಗಳ ನಂತರ ಬಾಂಬೆ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಭುಜ್ಬಲ್‌ರನ್ನು ಜಾರಿ ನಿರ್ದೇಶನಾಲಯ 2016ರಲ್ಲಿ ಬಂಧಿಸಿತ್ತು. ಭುಜ್ಬಲ್ ರಾಜ್ಯ ಸಾರ್ವಜನಿಕ ಕಲ್ಯಾಣ ಸಚಿವರಾಗಿದ್ದ ಸಮಯದಲ್ಲಿ ಅಕ್ರಮವಾಗಿ ಹಣ ಸಂಪಾದಿಸಿದ್ದರು. ಈ ಹಗರಣದಲ್ಲಿ ಅವರ ಕುಟುಂಬ ಸದಸ್ಯರೂ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ಭುಜ್ಬಲ್ ಪುತ್ರ ಮತ್ತು ಎನ್ಸಿಪಿ ಶಾಸಕ ಪಂಕಜ್ ಹಾಗೂ ಸೋದರಳಿಯ ಸಮೀರ್ ಕೂಡಾ ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಮಹಾರಾಷ್ಟ್ರ ಸದನ ಎಂಬ ಅತಿಥಿಗೃಹ ನಿರ್ಮಾಣದಲ್ಲಿ ಅಕ್ರಮ ಹಾಗೂ ಮುಂಬೈಯಲ್ಲಿ ಅಕ್ರಮವಾಗಿ ಜಮೀನು ಪಡೆದುಕೊಂಡ ಆರೋಪ ಅವರ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News