ಗಂಗೊಳ್ಳಿ: ತೌಹೀದ್ ಗರ್ಲ್ಸ್ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ
Update: 2018-05-04 21:34 IST
ಗಂಗೊಳ್ಳಿ, ಮೇ 4: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ತೌಹೀದ್ ಗರ್ಲ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ಆಯಿಶಾ ಸರ್ರಾ 576 (96 ಶೇ.) ಅಂಕ, ಮರ್ಯಮ್ 573 (95.5 ಶೇ.), ಆಯಿಶಾ ನುಹಾ 562 (93.6 ಶೇ.), ಬಿ.ಹಫ್ಸಾ ನೂರ್ 544 (90.66 ಶೇ.), ಅನಿಸಾ 544 (90.66ಶೇ.) ಹಾಗೂ ತಸ್ಮಯಾ ಬಾನು ಜಿ. 542 (90.33 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಾಲೇಜು ಒಟ್ಟು 90.24 ಶೇ. ಫಲಿತಾಂಶ ದಾಖಲಿಸಿದ್ದರು. ಒಂಬತ್ತು ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ, 14 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.