ಜಗತ್ತಿನಲ್ಲೇ ಅತ್ಯಧಿಕ ತಾಪಮಾನ: ಪಾಕ್‌ನ ನವಾಬ್‌ಶಾ ನಗರ ದಾಖಲೆ
Update: 2018-05-04 22:53 IST
ಇಸ್ಲಾಮಾಬಾದ್,ಮೇ 4: ಬಿಸಿಲ ಬೇಗೆಗೆ ತತ್ತರಿಸಿರುವ ಪಾಕಿಸ್ತಾನದ ನವಾಬ್ ಶಾ ನಗರದಲ್ಲಿ ಸೋಮವಾರ ತಾಪಮಾನ 50.2 ಡಿಗ್ರಿ ಸೆಂಟಿಗ್ರೇಡ್‌ಗೆ ತಲುಪಿದ್ದು, ಎಪ್ರಿಲ್ ತಿಂಗಳಲ್ಲಿ ಜಗತ್ತಿನಲ್ಲೇ ಅತ್ಯಧಿಕ ತಾಪಮಾನ ದಾಖಲಾದ ಸ್ಥಳವೆಂಬ ದಾಖಲೆಯನ್ನು ನಿರ್ಮಿಸಿರುವುದಾಗಿ ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
ಸೋಮವಾರ ಬಿಸಿಲಿನ ಝಳಕ್ಕೆ 50ಕ್ಕೂ ಅಧಿಕ ಮಂದಿ ಬಸವಳಿದು ಬಿದ್ದಿದ್ದಾರೆ. ಬಿಸಿಲಿನ ತೀವ್ರತೆಗೆ ಹೆದರಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕಿದ ಕಾರಣ ಇಡೀ ನಗರ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು ಎಂದು ವರದಿಗಳು ತಿಳಿಸಿವೆ.
ಅಧುನಿಕ ದಾಖಲೆಗಳ ಪ್ರಕಾರ ನವಾಬ್‌ಶಾ ನಗರವು ಅತ್ಯಧಿಕ ತಾಪಮಾನ ದಾಖಲಾಗಿರುವ ಸ್ಥಳವಾಗಿದೆಯೆಂದು ಹವಾಮಾನ ವೈಪರೀತ್ಯ ಕುರಿತ ವಿಜ್ಞಾನಿ ಕ್ರಿಸ್ಟೋಫರ್ ಬರ್ಟ್ ಹೇಳಿದ್ದಾರೆ.