ಅಮೆರಿಕದ ಪೈಲಟ್‌ಗಳ ಮೇಲೆ ಚೀನಿಯರಿಂದ ಲೇಸರ್ ಉಪಟಳ: ಅಮೆರಿಕ ಆರೋಪ
ವಾಶಿಂಗ್ಟನ್, ಎ.4: ಒಂದೆಡೆ ಉತ್ತರ ಕೊರಿಯದ ಜೊತೆ ಸ್ನೇಹಹಸ್ತ ಚಾಚುತ್ತಿರುವ ಅಮೆರಿಕ ಚೀನಾದ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದೆ. ಚೀನಿಯರು ಆಫ್ರಿಕನ್ ರಾಷ್ಟ್ರವಾದ ಡಿಜಿಬೌಟಿಯಲ್ಲಿರುವ ಅಮೆರಿಕದ ಸೇನಾನೆಲೆಯಲ್ಲಿ ಹಲವಾರು ಸಂದರ್ಭಗಳಲ್ಲಿ ಮಿಲಿಟರಿ ದರ್ಜೆಯ ಲೇಸರ್ ಪಾಯಿಂಟರ್‌ಗಳನ್ನು ಅ ಮೆರಿಕದ ಪೈಲಟ್‌ಗಳ ಮೇಲೆ ಹಾಯಿಸಿದ್ದಾರೆಂದು ಅಮೆರಿಕದ ರಕ್ಷಣಾ ಕಾರ್ಯಾಲಯ ಪೆಂಟಾಗನ್ ಆಪಾದಿಸಿದೆ.
ಹಲವಾರು ವಾರಗಳಿಂದ ಇಂತಹ ಸರಣಿ ಘಟನೆಗಳು ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಅಮೆರಿಕದ ಅಧಿಕಾರಿಗಳಿಗೆ, ರಾಜತಾಂತ್ರಿಕ ನೆಲೆಯಲ್ಲಿ ಔಪಚಾರಿಕವಾಗಿ ದೂರು ನೀಡಿರುವುದಾಗಿ ಪೆಂಟಗಾನ್ ವಕ್ತಾರೆ ಡಾನಾ ವೈಟ್ ತಿಳಿಸಿದ್ದಾರೆ.
ಅಮೆರಿದ ಪೈಲಟ್‌ಗಳ ಮೇಲೆ ಲೇಸರ್ ಪಾಯಿಂಟರ್‌ಗಳನ್ನು ಹಾಯಿಸುವ ಅತ್ಯಂತ ಘಟನೆಗಳು ಅತ್ಯಂತ ಗಂಭೀರವಾದುದಾಗಿದ್ದು, ಇದರಿಂದ ನಮ್ಮ ಪೈಲಟ್‌ಗಳಿಗೆ ಅಪಾಯವಿರುವುದಾಗಿ ಹೇಳಿದ್ದಾರೆ.
ಡಿಜಿಬೌಟಿಯ ಸೇನಾ ನೆಲೆಯಲ್ಲಿ ಇಳಿಯುತ್ತಿದ್ದ ಅಮೆರಿಕದ ಸೇನಾ ಸರಕುಸಾಗಣೆ ವಿಮಾನದ ಪೈಲಟ್‌ಗಳ ಮೇಲೆ ಲೇಸರ್ ಕಿರಣಗಳನ್ನು ಚೀನಿ ಪ್ರಜೆಗಳೆನ್ನಲಾದವರು ಲೇಸರ್ ಪಾಯಿಂಟರ್‌ಗಳ ಮೂಲಕ ಕಿರಣಗಳನ್ನು ಹರಿಸಿದ್ದು, ಇದರಿಂದ ಅವರ ಕಣ್ಣುಗಳಿಗೆ ಹಾನಿಯಾಗಿದೆಯೆಂದು ಆಕೆ ಆರೋಪಿಸಿದ್ದಾರೆ.
ಡಿಜಿಬೌಟಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿರುವ ಅಮೆರಿಕ ಸೇನಾ ನೆಲೆಯ ಲೆಮೊನಿಯರ್ ಬೇಸ್‌ನ್ನು, ಅಮೆರಿಕವು ಪೂರ್ವ ಆಫ್ರಿಕ ಹಾಗೂ .ಯೆಮೆನ್‌ನಲ್ಲಿ ಭಯೋತ್ಪಾನೆ ನಿಗ್ರಹ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳುತ್ತಿದೆ. ಅತ್ಯಧಿಕ ಸಾಮರ್ಥ್ಯದ ಲೇಸರ್ ಕಿರಣಗಳನ್ನು ಅಮೆರಿಕದ ಪೈಲಟ್‌ಗಳ ಮೇಲೆ ಹಾಯಿಸಿದವರು ಚೀನಿಯರೆಂಬುದು ತನಗೆ ಖಾತರಿಯಿದೆಯೆಂದು ವೈಟ್ ತಿಳಿಸಿದ್ದಾರೆ.
ಕಳೆದ ವರ್ಷ ಚೀನಾವು ಡಿಜಿಭೌಟಿಯಲ್ಲಿರುವ ಅಮೆರಿಕ ಸೇನಾ ನೆಲೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಸೇನಾ ನೆಲೆಯೊಂದನ್ನು ತೆರೆದಿತ್ತು.