ದಕ್ಷಿಣ ಚೀನಾ ಸಮುದ್ರದಲ್ಲಿ ಸೇನಾನೆಲೆ ವಿಸ್ತರಿಸಿದಲ್ಲಿ ಗಂಭೀರ ಪರಿಣಾಮ: ಚೀನಾಗೆ ಅಮೆರಿಕ ಎಚ್ಚರಿಕೆ

Update: 2018-05-04 17:37 GMT

ವಾಶಿಂಗ್ಟನ್,ಮೇ 4: ಪಶ್ಚಿಮ ಪೆಸಿಫಿಕ್ ಸಾಗರದ ವಿವಾದಿತ ಜಲಪ್ರದೇಶದಲ್ಲಿ ಚೀನಾವು ತನ್ನ ಸೇನಾನೆಲೆಯನ್ನು ವಿಸ್ತರಿಸುವುದನ್ನು ಮುಂದುವರಿಸಿದಲ್ಲಿ ಅದು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಅಮೆರಿಕವು ಶುಕ್ರವಾರ ಚೀನಾಗೆ ಎಚ್ಚರಿಕೆ ನೀಡಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಮಿಲಿಟರೀಕರಣದ ಬಗ್ಗೆ ನಮಗೆಲ್ಲರಿಗೂ ಚೆನ್ನಾಗಿ ಅರಿವಿದೆಯೆಂದು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ಹೇಳಿದ್ದಾರೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಬೀಜಿಂಗ್ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವ ಬಗ್ಗೆ ನಾವು ಆತಂಕಗಳನ್ನು ವ್ಯಕ್ತಪಡಿಸಿದ್ದೇವೆ ಹಾಗೂ ಇದರಿಂದಾಗಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಗಂಭೀರ ಪರಿಣಾಮಗಳಾಗಲಿವೆಯೆಂದು ಆಕೆ ಹೇಳಿದ್ದಾರೆ. ವಿಯೆಟ್ನಾಂ, ಫಿಲಿಪ್ಪೀನ್ಸ್, ಚೀನಾ ಹಾಗೂ ಇತರ ಹಲವು ರಾಷ್ಟ್ರಗಳ ನಡುವೆ ಇರುವ ದಕ್ಷಿಣ ಚೀನಾ ಸಮುದ್ರವು ಬಹಳ ಸಮಯದಿಂದ ಗಡಿವಿವಾದ ಹೊಗೆಯಾಡುತ್ತಿದೆ.

ದಕ್ಷಿಣಚೀನಾ ಸಮುದ್ರದ ವಿವಾದಿತ ಪ್ರದೇಶದಲ್ಲಿ ತನ್ನ ರಕ್ಷಣಾ ಘಟಕಗಳನ್ನು ನಿರ್ಮಿಸಲು ತನಗಿರುವ ಹಕ್ಕನ್ನು ಚೀನಾ ಪ್ರತಿಪಾದಿಸಿತ್ತು. ಆದರು ತಾನು ಅಲ್ಲಿ ನಿರ್ಮಿಸಿರುವ ಕೃತಕ ದ್ವೀಪಗಳಲ್ಲಿ ಕ್ಷಿಪಣಿಗಳನ್ನು ಸ್ಥಾಪಿಸಿದ್ದೇನೆಂಬ ವರದಿಗಳನ್ನು ದೃಢಪಡಿಸಲು ಅದು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News