ಮಂಗಳೂರು: ಶ್ರೀಕರ ಪ್ರಭು ಪಾದಯಾತ್ರೆ
Update: 2018-05-04 23:13 IST
ಮಂಗಳೂರು, ಮೇ 4: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಶುಕ್ರವಾರ ನಗರದ ಲೇಡಿಹಿಲ್, ಉರ್ವಮಾರ್ಕೆಟ್, ಉರ್ವಸ್ಟೋರ್, ಕೊಟ್ಟಾರ ಪರಿಸರದಲ್ಲಿ ಬೆಂಬಲಿಗರೊಂದಿಗೆ ಪಾದಯಾತ್ರೆಯ ಮೂಲಕ ತಮ್ಮ ಚುನಾವಣಾ ಚಿಹ್ನೆ ‘ಆಟೊ ರಿಕ್ಷಾ’ ಮಾದರಿ ಪ್ರದರ್ಶಿಸಿ ಮತಯಾಚನೆ ಮಾಡಿದರು.
ಈ ಸಂದರ್ಭ ಶ್ರೀಕರ ಪ್ರಭು ಅಭಿಮಾನಿ ಬಳಗದ ಅಧ್ಯಕ್ಷ ಕೆ.ಪಿ. ಶೆಟ್ಟಿ ಬೇಡೆಮಾರ್, ಉಸ್ತುವಾರಿ ಸುರೇಶ ಶೆಟ್ಟಿ, ಸಂಯೋಜಕ ಅವಿನಾಶ್ ಶೆಟ್ಟಿ, ನಿತಿನ್ ಸುವರ್ಣ, ಆನಂದ ಶೆಟ್ಟಿ, ರಾಮ್ ಮೋಹನ್, ಮಹೇಶ್ ಭಟ್, ಜೈರಾಮ್ ಕಾಮತ್, ಯತೀಶ್ ಕುಮಾರ್, ಶರತ್ ಅಮೀನ್, ಸೀಮಾ ಪ್ರಭು, ಐಶ್ವರ್ಯ ನಾಯಕ್ ಮತ್ತಿತರು ಉಪಸ್ಥಿತರಿದ್ದರು.