ಔಷಧಿ ಅಕ್ರಮ ಮಾರಾಟ: ಭಾರತೀಯ ಮೂಲದ ಮೂವರು ವೈದ್ಯರ ಬಂಧನ

Update: 2018-05-04 17:43 GMT

ವಾಶಿಂಗ್ಟನ್, ಮೇ4: ಆರೋಗ್ಯ ಪಾಲನೆ ವಂಚನೆ ಹಾಗೂ ಮಾದಕದ್ರವ್ಯ ವ್ಯಸನಿಗಳ ಚಿಕಿತ್ಸೆಗೆ ನೀಡಲಾಗುವ ಔಷದಿಯನ್ನು ಅಕ್ರಮವಾಗಿ ವಿತರಿಸಿದ ಹಗರಣಕ್ಕೆ ಸಂಬಂಧಿಸಿ ಅಮೆರಿಕದ ಪೆನ್ಸಿಲ್ವೆನಿಯಾ ರಾಜ್ಯದಲ್ಲಿನ ಮೂವರು ಭಾರತೀಯ ಮೂಲದ ವೈದ್ಯರ ನ್ನು ಬಂಧಿಸಲಾಗಿದೆ. ಡಾ.ಕೃಷ್ಣಕುಮಾರ್ (73), ಡಾ. ಮಧು ಅಗರ್‌ವಾಲ್ (68), ಡಾ. ಪಾರ್ಥ ಭರಿಲ್ (69) ಬಂಧಿತ ವೈದ್ಯರು. ಮಾದಕದ್ರವ್ಯ ವ್ಯಸನಿಗಳಿಗೆ ಚಿಕಿತ್ಸೆಗಾಗಿ ನೀಡಲಾಗುವ ಬ್ಯೂಪರ್‌ನಾರ್ಫಿಲ್ ಎಂಬ ಔಷಧಿಯನ್ನು ಅನಧಿಕೃತವಾಗಿ ಮಾರಾಟ ಮಾಡಿದ್ದಾರೆಂಬ ದೋಷಾರೋಪವನ್ನು ಈ ಮೂವರ ವಿರುದ್ಧ ಹೊರಿಸಲಾಗಿದೆ. ಈ ಮೂವರು ಆರೋಪಿ ವೈದ್ಯರು ಮಾದಕದ್ರವ್ಯ ವ್ಯಸನಿಗಳಿಗೆ ಚಿಕಿತ್ಸೆ ನೀಡುವ ತಜ್ಞ ವೈದ್ಯರಾಗಿದ್ದಾರೆ.

ಬ್ಯೂಪರ್‌ನಾರ್ಫಿಲ್ ಎಂಬ ಔಷಧಿಯನ್ನು ಅನಧಿಕೃತವಾಗಿ ಮಾರಾಟ ಮಾಡಲು ಸಂಚು ಹೂಡಿದ ಹಾಗೂ ಅದನ್ನು ಅಧಿಕ ಬೆಲೆಯಲ್ಲಿ ಮಾರಾಟ ಮಾಡಿದ ಆರೋಪವನ್ನು ಈ ಮೂವರ ವಿರುದ್ಧ ಹೊರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News