×
Ad

ನ್ಯೂಯಾರ್ಕ್ ಸಿವಿಲ್ ಕೋರ್ಟ್‌ನ ಹಂಗಾಮಿ ನ್ಯಾಯಾಧೀಶೆಯಾಗಿ ಎನ್‌ಆರ್‌ಐ ಅಂಬೇಕರ್ ನೇಮಕ

Update: 2018-05-04 23:17 IST

ನ್ಯೂಯಾರ್ಕ್, ಮೇ 4: ಭಾರತೀಯ ಮೂಲದ ಅಮೆರಿಕನ್ ಮಹಿಳೆ ದೀಪಾ ಅಂಬೇಕರ್, ನ್ಯೂಯಾರ್ಕ್ ನಗರದ ಸಿವಿಲ್ ನ್ಯಾಯಾಲಯದ ಹಂಗಾಮಿ ನ್ಯಾಯಾಧೀಶೆಯಾಗಿ ಗುರುವಾರ ನೇಮಕಗೊಂಡಿದ್ದಾರೆ.

ಚೆನ್ನೈ ಮೂಲದ ಅಮೆರಿಕನ್ ನ್ಯಾಯಾಧೀಶೆ ರಾಜರಾಜೇಶ್ವರಿ ನಂತರ, ನ್ಯೂಯಾರ್ಕ್ ನಗರದಲ್ಲಿ ನ್ಯಾಯಾಧೀಶರ ಹುದ್ದೆಯನ್ನು ಆಲಂಕರಿಸಿದ ಎರಡನೆ ಮಹಿಳೆಯೆಂಬ ಹೆಗ್ಗಳಿಕೆಗೆ ದೀಪಾ ಅಂಬೇಕರ್ ಪಾತ್ರರಾಗಿದ್ದಾರೆ.

41 ವರ್ಷದ ದೀಪಾ ಅಂಬೇಕರ್ ನ್ಯೂಯಾರ್ಕ್‌ನ ಸಿವಿಲ್ ನ್ಯಾಯಾಲಯದ ಕ್ರಿಮಿನಲ್ ವಿಭಾಗದ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.

 ಅಂಬೇಕರ್ ಈ ಮೊದಲು ನ್ಯೂಯಾರ್ಕ್ ನಗರದ ಮಂಡಳಿಯಲ್ಲಿ ಹಿರಿಯ ಲೆಜಿಸ್ಲೇಟಿವ್ ಅಟಾರ್ನಿಯಾಗಿ ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತ ಕಾನೂನು ಸಮಾಲೋಚಕಿಯಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News