×
Ad

ಸಿದ್ದರಾಮಯ್ಯ ಸರಕಾರ ಬಂದರೆ ಭೂತದ ಕೋಲ ನಡೆಯದು: ಸಂಸದ ನಳಿನ್

Update: 2018-05-05 22:22 IST

ಮಂಗಳೂರು, ಮೇ 5: ಸಿದ್ದರಾಮಯ್ಯ ಸರಕಾರ ಆಡಳಿತಕ್ಕೆ ಬಂದರೆ ಕಲ್ಲುರ್ಟಿ ಸೇರಿದಂತೆ ಭೂತದ ಕೋಲಗಳು ನಡೆಯದು ಎಂದು ಸಂಸದ ನಳಿನ್ ಕುಮಾರ್ ಹೇಳಿದರು.

ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಎಂಟೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್‌ನ ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ಹಿಂದೂಗಳ ದಾರುಣ ಹತ್ಯೆ, ಸಿದ್ದರಾಮಯ್ಯರ ಒಡೆದಾಳುವ ನೀತಿ, ವೀರಶೈವ ಲಿಂಗಾಯಿತರನ್ನು ಒಡೆಯುವ ತಂತ್ರ, ಜತೆಗೆ ಮೂಢ ನಂಬಿಕೆ ಹೆಸರಿನಲ್ಲಿ ಮಠ ಮಂದಿರಗಳನ್ನು ಒಡೆಯುವ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News