ಉ. ಕೊರಿಯದ ಕಾಲಮಾನ 30 ನಿಮಿಷ ಮುಂದಕ್ಕೆ!

Update: 2018-05-05 17:03 GMT

ಸಿಯೋಲ್, ಮೇ 5: ಉತ್ತರ ಕೊರಿಯದ ಕಾಲಮಾನವನ್ನು ಶುಕ್ರವಾರ 30 ನಿಮಿಷಗಳಷ್ಟು ಮುಂದಕ್ಕೆ ಹಾಕಲಾಗಿದ್ದು, ಈಗ ಅದು ದಕ್ಷಿಣ ಕೊರಿಯದ ಕಾಲಮಾನದೊಂದಿಗೆ ಬೆರೆತಿದೆ.

ಕಳೆದ ವಾರ ನಡೆದ ಉಭಯ ಕೊರಿಯಗಳ ನಾಯಕರ ಶೃಂಗಸಭೆಯ ಬಳಿಕ ಈ ಬೆಳವಣಿಗೆ ನಡೆದಿದೆ.

 ‘‘ಸಮಯ ಬದಲಾವಣೆಯು ಐತಿಹಾಸಿಕ ಮೂರನೆ ಉತ್ತರ-ದಕ್ಷಿಣ ಶೃಂಗಸಮ್ಮೇಳನದ ಬಳಿಕ, ಉತ್ತರ ಮತ್ತು ದಕ್ಷಿಣ ಕೊರಿಯಗಳು ಒಂದಾಗುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಮೊದಲ ಪ್ರಾಯೋಗಿಕ ಕ್ರಮವಾಗಿದೆ’’ ಎಂದು ಉತ್ತರ ಕೊರಿಯದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್‌ಎ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News