×
Ad

ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮನೆ ಮೇಲೆ ಚುನಾವಣಾಧಿಕಾರಿಗಳಿಂದ ದಾಳಿ

Update: 2018-05-05 22:59 IST

ಪಡುಬಿದ್ರೆ, ಮೇ 5: ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮನೆ ಮೇಲೆ ಚುನಾವಾಣಾಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ ಘಟನೆ ಶನಿವಾರ ಸಂಜೆ ಪಣಿಯೂರಿನಲ್ಲಿ ನಡೆದಿದೆ.

ಕಾಪು ವಿಧಾನಸಭಾ ಕ್ಷೇತ್ರದ ಉಚ್ಚಿಲದ ಪಣಿಯೂರಿನಲ್ಲಿ ಚುನಾವಣಾ ಪ್ರಚಾರ ನಡೆಸುತಿದ್ದ ತಾಲ್ಲೂಕು ಪಂಚಾಯತ್ ಸದಸ್ಯ ಶೇಖಬ್ಬ ಹಾಗೂ ಕಾರ್ಯಕರ್ತರು ತೆರಳುತಿದ್ದ ವಾಹನವವನ್ನು ಪಣಿಯೂರು ಬಳಿ ಅಧಿಕಾರಿಗಳು ನಿಲ್ಲಿಸಿ ವಾಹನಗಳನ್ನು ಪರಿಶೀಲನೆ ನಡೆಸಿದರು. ವಾಹನದಲ್ಲಿ ಪ್ರಚಾರ ಸಾಮಾಗ್ರಿಗಳು ಮಾತ್ರ ಇರುವುದನ್ನು ಕಂಡುಬಂತು ಎಂದು ಹೇಳಲಾಗಿದೆ.

ಬಳಿಕ ಅಧಿಕಾರಿಗಳು ದೇವಿಪ್ರಸಾದ್ ಶೆಟ್ಟಿ ಅವರ ಮನೆಗೆ ತೆರಳಿ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶೆಟ್ಟಿ ಅವರು ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತಿರುವುದು ಕಂಡು ಬಂತು ಎಂದು ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News