×
Ad

ಚುನಾವಣಾ ಆಯೋಗದ ನಡವಳಿಕೆ ಬೇಸರ ತಂದಿದೆ: ಕೆ.ಪಿ ಜಗದೀಶ ಅಧಿಕಾರಿ

Update: 2018-05-05 23:06 IST

ಮೂಡುಬಿದಿರೆ, ಮೇ.5: ಈ ಬಾರಿಯ ವಿಧಾನಸಭಾ ಚುನಾವಣೆ ಮುಕ್ತವಾಗಿ ನಡೆಯಬೇಕು, ಶಾಂತ ರೀತಿಯಲ್ಲಿ ನಡೆಯಬೇಕೆಂಬ ದೃಷ್ಟಿಯಿಂದ ಚುನಾವಣಾ ಆಯೋಗ ತೋರ್ಪಡಿಸುವ ನಡವಳಿಕೆ ಬೇಸರ ತಂದಿದೆ ಇದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದ್ದು ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಬಿಜಿಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ ಅಧಿಕಾರಿ ವಿಷಾದ ವ್ಯಕ್ತಪಡಿಸಿದರು.

ಅವರು ಶನಿವಾರ ಖಾಸಗಿ ಹೋಟೇಲೊಂದರಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಚುನಾವಣಾ ಆಯೋಗ ಸಾವಿನ ಮನೆಗೆ ಹೋಗಿ ವಿಚಾರಣೆ ಮಾಡುವುದು ಕೌಟುಂಬಿಕ ಸಮಾರಂಭಗಳತ್ತ ಧಾವಿಸಿ ವಿಚಾರಣೆ ಮಾಡಿ ಜನರ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಸರಿಯಲ್ಲ, ಪಕ್ಷದ ಚಿಹ್ನೆಯ ಹೆಸರಿನಲ್ಲಿ ಜನರ ವ್ಯಕ್ತಿಗತ ವಿಚಾರಗಳ ಮೇಲೇರಗುವುದು ಹೇಯವಾದ ಯೋಚನೆ ಎಂದು ಹೇಳಿದರು.

ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕಾದರೆ ಕರಾವಳಿಯಲ್ಲಿ ಬಿಜೆಪಿ ಬಹುತೇಕ ಸ್ಥಾನವನ್ನು ಭದ್ರಪಡಿಸ ಬೇಕು ಆ ನಿಟ್ಟಿನಲ್ಲಿ ನಮ್ಮ ಯತ್ನ ನಡೆಯುತ್ತಿದೆ ಎಂದು ಆಶಾವಾದ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News