ಬಡ ಕುಟುಂಬದ ಯುವತಿಯ ಮದುವೆಗೆ ಎಸ್ಸೆಸ್ಸೆಫ್ ಕಲ್ಮಿಂಜ ಶಾಖೆ ಸಹಾಯ
Update: 2018-05-06 18:02 IST
ಮುಡಿಪು, ಮೇ 6: ಇಲ್ಲಿನ ನರಿಂಗಾನ ಗ್ರಾಮದ ಕಲ್ಮಿಂಜ ಜಮಾಅತಿಗೆ ಒಳಪಟ್ಟ ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದ ಯುವತಿಯ ಮದುವೆಗೆ ಎಸ್ಸೆಸ್ಸೆಫ್ ಕಲ್ಮಿಂಜ ಶಾಖೆ ಸಹಾಯ ಮಾಡಿದೆ.
ಎಸ್ಸೆಸ್ಸೆಫ್ ಕಲ್ಮಿಂಜ ಶಾಖೆಯ ಸದಸ್ಯರು ಮತ್ತು ದಾನಿಗಳು ಸುಮಾರು 75,000 ರೂಪಾಯಿ ಧನ ಸಹಾಯ ಮತ್ತು ಚಿನ್ನ ನೀಡಿ ನೆರವಾಗಿದ್ದಾರೆ.
ಈ ಸಂದರ್ಭ ಎಸ್ ವೈಎಸ್ ಅಧ್ಯಕ್ಷರಾದ ಉಮರ್ ಸಖಾಫಿ, ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಕಾರ್ಯದರ್ಶಿ ಮುನೀರ್ ಕಲ್ಮಿಂಜ, ಎಸ್ಸೆಸ್ಸೆಫ್ ಕಲ್ಮಿಂಜ ಶಾಖೆಯ ಪ್ರಧಾನ ಕಾರ್ಯದರ್ಶಿ ರಶೀದ್ ಪೂಡಲ್, ಹರ್ಶಿದ್ ಎಂ.ಹೆಚ್, ಸತ್ತಾರ್ ಮದಕ ಮೊದಲಾದವರು ಉಪಸ್ಥಿತರಿದ್ದರು.