×
Ad

ನೀಟ್ ಪರೀಕ್ಷೆ: 3412 ವಿದ್ಯಾರ್ಥಿಗಳು ಹಾಜರು

Update: 2018-05-06 20:20 IST

ಉಡುಪಿ, ಮೇ 6: ವೈದ್ಯ ಮತ್ತು ದಂತ ವೈದ್ಯ ಪದವಿಗೆ ಪ್ರವೇಶ ಕಲ್ಪಿಸುವ 2018ನೆ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯು ಉಡುಪಿಯ ಎಂಟು ಕೇಂದ್ರಗಳಲ್ಲಿ ರವಿವಾರ ನಡೆದಿದ್ದು, 3412 ವಿದ್ಯಾರ್ಥಿ ಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.

ಒಟ್ಟು 3906 ವಿದ್ಯಾರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದು, ಉಡುಪಿ ಕ್ರಿಶ್ಚಿಯನ್ ಸ್ಕೂಲ್ ಕೇಂದ್ರದಲ್ಲಿ 240, ಬ್ರಹ್ಮಾವರ ಲಿಟ್ಲ್ ರಾಕ್ ಸ್ಕೂಲ್‌ನಲ್ಲಿ 720, ಮಣಿಪಾಲ ಮಾಧವ ಕೃಪಾ ಸ್ಕೂಲ್‌ನಸ್ಲಿ 780, ಉಡುಪಿ ಪೂರ್ಣ ಪಜ್ಞ ಪದವಿ ಪೂರ್ವ ಕಾಲೇಜಿನಲ್ಲಿ 480, ಬ್ರಹ್ಮಾವರ ಎಸ್‌ಎಂಎಸ್ ಸ್ಕೂಲ್ ನಲ್ಲಿ 480, ಎಸ್‌ಎಂಎಸ್ ಪದವಿ ಕಾಲೇಜಿನಲ್ಲಿ 360, ಉಡುಪಿ ಸೈಂಟ್ ಮೇರಿಸ್ ಸ್ಕೂಲ್‌ನಲ್ಲಿ 600, ಬ್ರಹ್ಮಾವರ ಜಿ.ಎಂ.ವಿದ್ಯಾನಿಕೇತನ ಸ್ಕೂಲ್‌ನ ಕೇಂದ್ರದಲ್ಲಿ 246 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ನೋಂದಾವಣೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳಲ್ಲಿ 494 ಮಂದಿ ಗೈರುಹಾಜರಾಗಿದ್ದಾರೆಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News