×
Ad

ಬಿಜೆಪಿ ಪರ ಅಲ್ಪಸಂಖ್ಯಾತರಿಂದ ಮತಯಾಚನೆ

Update: 2018-05-07 20:56 IST

ಉಳ್ಳಾಲ, ಮೇ 7: ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಲ್ಲಾಪು ಮುಡಿಪೋಡಿ ಪರಿಸರದಲ್ಲಿ ಅಲ್ಪಸಂಖ್ಯಾತ ಘಟಕವು ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಪರ ಮತಯಾಚನೆ ಮಾಡಿತು.

ಈ ಸಂದರ್ಭ ಬಿಜೆಪಿ ಅಲ್ಪ ಸಂಖ್ಯಾತ ಘಟಕದ ಡಾ. ಮುನೀರ್ ಬಾವಾ, ಫಝಲ್ ಅಸೈಗೋಳಿ, ಉಳ್ಳಾಲ ನಗರಸಭೆಯ ಮಾಜಿ ನಾಮನಿರ್ದೇಶಿತ ಸದಸ್ಯರಾದ ಚಂದ್ರಹಾಸ್ ಪಂಡಿತ್‌ಹೌಸ್, ಪುರುಷೋತ್ತಮ ಕಲ್ಲಾಪು, ಅಸ್ಗರ್ ಮುಡಿಪು, ಆದರ್ಶ್ ಮತ್ತು ಅಲ್ಪ ಸಂಖ್ಯಾತ ಘಟಕದ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News