×
Ad

ಎಸೆಸೆಲ್ಸಿ: ತಮಿಳು ಮೂಲದ ಬಟ್ಟೆಯ ವ್ಯಾಪಾರಿಯ ಮಗಳ ಸಾಧನೆ

Update: 2018-05-07 22:18 IST

ಉಡುಪಿ, ಮೇ 7: ತಮಿಳುನಾಡು ಮೂಲದ ಬಟ್ಟೆ ವ್ಯಾಪಾರಿಯ ಮಗಳು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಉಡುಪಿಯಲ್ಲಿ ಬಟ್ಟೆಗಳ ಲೈನ್‌ಸೇಲ್ ವೃತ್ತಿ ಮಾಡುವ ತಮಿಳುನಾಡು ಮೂಲದ ಮುರುಗನ್ ಮತ್ತು ನಾಗವೇಣಿ ದಂಪತಿ ಪುತ್ರಿ, ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಕೀರ್ತನಾ ಎಂ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಯಲ್ಲಿ 603 ಅಂಕ ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ.

ಮುರುಗನ್ ಕಳೆದ 27 ವರ್ಷಗಳಿಂದ ಉಡುಪಿಯ ದೊಡ್ಡಣಗುಡ್ಡೆಯಲ್ಲಿ ನೆಲೆಸಿದ್ದಾರೆ. ಇವರ ಮಗಳು ಯಾವುದೇ ಟ್ಯೂಷನ್ ಇಲ್ಲದೆ, ಸ್ವತಃ ತಾನೆ ಮನೆಯಲ್ಲಿ ಅಭ್ಯಾಸ ಮಾಡಿ ಉತ್ತಮ ಸಾಧನೆ ಮಾಡಿದ್ದಾಳೆ. ಈಕೆ ಕನ್ನಡದಲ್ಲಿ 125ರಲ್ಲಿ 124 ಅಂಕ ಪಡೆದಿದ್ದಾಳೆ.

ಕ್ರೀಡೆಯಲ್ಲೂ ಪ್ರತಿಭಾನ್ವಿತಳಾಗಿರುವ ಕೀರ್ತನಾ, ಟೇಬಲ್ ಟೆನ್ನಿಸ್ ಸ್ಪರ್ಧೆ ಯಲ್ಲಿ 30ಕ್ಕೂ ಅಧಿಕ ಪದಕಗಳನ್ನು ಗೆದ್ದುಕೊಂಡಿದ್ದಾಳೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಶಿಕ್ಷಣ ಪೂರೈಸಿ ವೈದ್ಯಯಾಗುವ ಗುರಿಯನ್ನು ಈಕೆ ಹೊಂದಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News