ಎಸೆಸೆಲ್ಸಿ: ದ.ಕ. ಶೇ. 85.56 ಫಲಿತಾಂಶ; ಹೆಣ್ಣು ಮಕ್ಕಳದ್ದೇ ಮೇಲುಗೈ
ಮಂಗಳೂರು, ಮೇ 7: 2018ರ ಮಾರ್ಚ್ /ಎಪ್ರಿಲ್ ತಿಂಗಳಿನಲ್ಲಿ ನಡೆದ ಎಸೆಸೆಲ್ಪಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ದ.ಕ. ಜಿಲ್ಲೆ ಶೇ. 85.56 ಪಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.2.17 ಹೆಚ್ಚಿನ ಫಲಿತಾಂಶ ದಾಖಲಿಸಿದೆ.
ಜಿಲ್ಲೆಯಿಂದ ಪರೀಕ್ಷೆ ಬರೆದ 28,068 ವಿದ್ಯಾರ್ಥಿಗಳಲ್ಲಿ 24,014 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ತೇರ್ಗಡೆ ಹೊಂದಿದವರಲ್ಲಿ 11,416 ಗಂಡು ಮಕ್ಕಳು ಹಾಗೂ 12,595 ಹೆಣ್ಣು ಮಕ್ಕಳು ಸೇರಿದ್ದಾರೆ. ಕಳೆದ ಬಾರಿ ದ.ಕ. ಜಿಲ್ಲೆ ಶೇ.82.39 ಫಲಿತಾಂಶ ದಾಖಲಾಗಿತ್ತು.
ತಾಲೂಕು ವಾರು ವಿವರ
ಮೂಡಬಿದ್ರೆ: 2124 ವಿದ್ಯಾರ್ಥಿಗಳಲ್ಲಿ 1934 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೂಡಬಿದ್ರೆ ತಾಲೂಕು ಶೇ.91.05 ಫಲಿತಾಂಶ ದಾಖಲಿಸಿದೆ.
ಬೆಳ್ತಂಗಡಿ: ಪರೀಕ್ಷೆ ಬರೆದ 3711 ವಿದ್ಯಾರ್ಥಿಗಳಲ್ಲಿ 3288 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ. 88.60 ಫಲಿತಾಂಶ ದಾಖಲಿಸಿದೆ.
ಮಂಗಳೂರು ಉತ್ತರ: 5,134 ವಿದ್ಯಾರ್ಥಿಗಳ ಪೈಕಿ 4,446 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 86.60 ಫಲಿತಾಂಶ ಬಂದಿದೆ.
ಮಂಗಳೂರು ದಕ್ಷಿಣ: 5451 ವಿದ್ಯಾರ್ಥಿಗಳಲ್ಲಿ 4598 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ. 84.35 ಫಲಿತಾಂಶ ಬಂದಿದೆ.
ಪುತ್ತೂರು: 4612 ವಿದ್ಯಾರ್ಥಿಗಳಲ್ಲಿ 3973 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ. 86.14 ಫಲಿತಾಂಶ ಪಡೆದಿದೆ.
ಸುಳ್ಯ: 1834 ವಿದ್ಯಾರ್ಥಿಗಳಲ್ಲಿ 1550 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸುಳ್ಯ ತಾಲೂಕು ಶೇ.84.51 ಫಲಿತಾಂಶ ಪಡೆದಿದೆ.
ಬಂಟ್ವಾಳ: 5202ವಿದ್ಯಾರ್ಥಿಗಳಲ್ಲಿ 4225 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ.81.22 ಫಲಿತಾಂಶ ಪಡೆದಿದೆ.
ತಾಲೂಕುವಾರು ಫಲಿತಾಂಶದಲ್ಲಿ ಮೂಡಬಿದ್ರೆ ಪ್ರಥಮ, ಬೆಳ್ತಂಗಡಿ ದ್ವಿತೀಯ ಹಾಗೂ ಮಂಗಳೂರು ಉತ್ತರ ತೃತೀಯ ಸ್ಥಾನದಲ್ಲಿದೆ. ತಾಲೂಕುವಾರು ಫಲಿತಾಂಶದಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.