×
Ad

ಎಂಡೋ ಪಾಲನಾ ಕೇಂದ್ರದ ಇಬ್ಬರು ವಿದ್ಯಾರ್ಥಿಗಳಿಗೆ ಉತ್ತಮ ಅಂಕ

Update: 2018-05-07 22:50 IST

ಮಂಗಳೂರು, ಮೇ 7: ಸೇವಾ ಭಾರತಿ  ನಡೆಸುತ್ತಿರುವ ಕೊಕ್ಕಡ ಮತ್ತು ಕೊಯ್ಲ ಎಂಡೋ ಪಾಲನಾ ಕೇಂದ್ರದ ಇಬ್ಬರು ವಿದ್ಯಾರ್ಥಿಗಳು ಖಾಸಗಿಯಾಗಿ ಎಸೆಸೆಲ್ಸಿ ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿ ತೇರ್ಗಡೆಯಾಗಿದ್ದಾರೆ. 

ಕರ್ನಾಟಕದಲ್ಲೇ ಪ್ರಥಮವಾಗಿ ಎಂಡೋ ಪೀಡಿತ ವಿದ್ಯಾರ್ಥಿಗಳು ಪಾಲನಾ ಕೇಂದ್ರದ ಮೂಲಕ ತರಬೇತಿ ಪಡೆದು ಕೊಕ್ಕಡ ಸರಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ, ಕೊಯ್ಲ ರಾಮಕುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ ಮತ್ತು ಡಿ.ಡಿ.ಪಿ.ಐ ಸಹಕಾರದಿಂದ ಬರಹಗಾರರ ಸಹಕಾರ ದಿಂದ ಪರೀಕ್ಷೆ ಬರೆದಿರುತ್ತಾರೆ. ಕೊಯ್ಲದ ಅಭಿಷೇಕ್ ಎಲ್ಲಾ ವಿಷಯಗಳನ್ನು ಸಾಮಾನ್ಯ ವಿದ್ಯಾರ್ಥಿಗಳ ಹಾಗೆ ಬರಹಗಾರ್ತಿ ಸ್ವಾಹಿಲ್ ಸಹಕಾರದಿಂದ ಬರೆದು ಶೇ. 77 ಅಂಕ ಪಡೆದು ತೇರ್ಗಡೆಯಾಗಿದ್ದಾರೆ. ಈತನಿಗೆ ಸೆಲಬ್ರಲ್ ಪ್ಲಾಸಿ ಶೇ.75% ಅಂಗ ನ್ಯೂನತೆಯಿದೆ. ಕೊಯ್ಲದ ಶ್ರೀ ವಿಶ್ವನಾಥ ಮತ್ತು ಶ್ರೀಮತಿ ಗಂಗರತ್ನ ದಂಪತಿಯ ಪುತ್ರ.

ತುಳಸಿ ಎನ್. ಕೊಕ್ಕಡದ ಶ್ರೀ ನಾರಾಯಣ ನಾಯ್ಕ್, ಯಶೋದ ಅವರ ಪುತ್ರಿ ಹಿಂದಿ ಮತ್ತು ಇಂಗ್ಲಿಷ್ ನಿಂದ ವಿನಾಯಿತಿ ಪಡೆದು ಉಳಿದ ವಿಷಯಗಳಲ್ಲಿ ಶೇ.66 ಅಂಕ ಪಡೆದು ತೇರ್ಗಡೆಯಾಗಿದ್ದಾರೆ. ಈಕೆಯ ವಿಶೇಷತೆ ಶೇ.90 ಅಂಗ ನ್ಯಾನತೆಯಿದ್ದರೂ ಕಷ್ಟ ಪಟ್ಟು ಆಕೆಯೇ  ಉತ್ತರ ಬರೆದು ದಣಿವಾದಾಗ ಜೀವನ್ ಎಂಬ ಬರಹಗಾನ ಸಹಕಾರ ಪಡೆದಿರುತ್ತಾರೆ. ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಎರಡೂ ಶಾಲೆಯ ಮುಖ್ಯೋಪಾದ್ಯಾಯರುಗಳು ಮತ್ತು ಎಂಡೋಪಾಲನಾ ಕೇಂದ್ರದ ಕೇಂದ್ರದ ಶಿಕ್ಷಕ ವೃಂದಕ್ಕೆ ಸೇವಾಭಾರತಿ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News