×
Ad

ಮಂಗಳೂರಿನಲ್ಲಿ ಸಿಡಿಲು, ಮಿಂಚು ಸಹಿತ ಮಳೆ

Update: 2018-05-07 23:02 IST

ಮಂಗಳೂರು, ಮೇ 7: ಮಂಗಳೂರಿನಲ್ಲಿ ಸೋಮವಾರ ರಾತ್ರಿ ಗಾಳಿ ಸಹಿತ ಸಿಡಿಲು, ಮಿಂಚು ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ರಾತ್ರಿ ಸುಮಾರು 9:45ರ ಬಳಿಕ ಗಾಳಿ ಬೀಸಲು ಆರಂಭಿಸಿದ್ದು, ಬಳಿಕ ಸುಮಾರು ಅರ್ಧ ಗಂಟೆಗೂ ಹೆಚ್ಚಿನ ಕಾಲ ಸಿಡಿಲು ಮತ್ತು ಮಿಂಚು ಸಹಿತ ಮಳೆಯಾಗಿದೆ.

ಕಳೆದ ಕೆಲವು ದಿನಗಳ ಹಿಂದೆಯೂ ಒಂದೆರಡು ಬಾರಿ ಅಕಾಲಿಕ ಮಳೆಯಾಗಿದೆ. ಬಿಸಿಲ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಮಳೆಯ ಸಿಂಚನವು ತಂಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News