ಭಟ್ಕಳ ಆನಂದಾಶ್ರಮ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.98.72
ಭಟ್ಕಳ, ಮೇ 7: ಇಲ್ಲಿನ ಆನಂದ ಆಶ್ರಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.98.72 ಫಲಿತಾಂಶ ಪಡೆದುಕೊಂಡಿದೆ. ಅತ್ಯುತ್ತಮ ಶ್ರೇಣಿಯಲ್ಲಿ 30 ವಿದ್ಯಾರ್ಥಿಗಳು, 60 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 85 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶ್ರೇಯಾ ವಿ. ನಾಯಕ (615) ಶೇ.98.4, ಮಾನಸಾ ಗಣಪತಿ ಭಟ್ಟ (613) ಶೇ.98.08, ಮೆಲ್ರಿಕ್ ಡಿಸೋಜ (613) ಶೇ.98.08, ದರ್ಶನ್ ಡಿ. ನಾಯ್ಕ (611) ಶೇ.97.76, ಜೆಸಿಕಾ ಜೆ. ಪಿಂಟೋ (609) ಶೇ.97.44, ಸುಶ್ಮಿತಾ ಪಿ. ಗದ್ದೆಮನೆ (605) ಶೇ.96.8, ನಿಮ್ರಾ (604) ಶೇ.96.64, ಅನನ್ಯ ಗೋಕುಲದಾಸ ಪ್ರಭು (601) ಶೇ.96.16, ಅಂಕಿತಾ ಕೃಷ್ಣ ನಾಯ್ಕ (595) ಶೇ.95.2, ಮೊಹಮ್ಮದ್ ರಾಬೆ ಖಮರಿ (595) ಶೇ.95.2, ಆಕಾಂಕ್ಷಾ ಗಣೇಶ ಯಾಜಿ (593) ಶೇ.94.88, ಮುಹಮ್ಮದ್ ಉಮೇರ್ (593) ಶೇ.94.88, ಮುಹಮ್ಮದ್ ಸದೀದ್ (591) ಶೇ.94.56, ಭಾವನಾ ರಾಧಾಕೃಷ್ಣ ಭಟ್ಟ (589) ಶೇ.94.24, ಅನುಷ ದಾಮೋದರ ನಾಯ್ಕ (589) ಶೇ.94.24, ಸಾಗರ ಸತೀಶ ನಾಯ್ಕ (589) ಶೇ.94.24, ಅಮೋಘ ವಾಸು ನಾಯ್ಕ (587) ಶೇ.93.92, ಸಾಹಿಲ್ ಸುನಿಲ್ ಗೋವೇಕರ್ (587) ಶೇ.93.92, ಎನ್.ಜಿ. ಮಾಣಿಕ್ಯ (586) ಶೇ.93.76), ಮೊಹಮ್ಮದ್ ನುಮೇರ್ (585) ಶೇ.93.6, ಮೇದಿನಿ ಸಂತೋಷ ನಾಯ್ಕ (585) ಶೇ.93.6, ಐಶಾ ಫಿಜಾ (579) ಶೇ.92.64, ರಚನಾ ಗಣಪತಿ ಮಡಿವಾಳ (579) ಶೇ.92.64, ಅನುಷ ದಿನಕರ ಪ್ರಭು (578) ಶೇ.92.48, ವರೇಣ್ಯ ನಾಯಕ (574) ಶೇ.91.84, ನಾರಾಯಣಿ ಉದಯ್ ಪೈ (572) ಶೇ.91.52, ಸಹನಾ ಎಸ್. ಪೈ (572) ಶೇ.92.52, ವಿಶ್ರುತಾ ವಿ.ಬಿ. (571) ಶೇ.91.36, ರಾಮದಾಸ ದಿನೇಶ ಶಾನಭಾಗ (568) ಶೇ.90.88, ತನಿಶ್ ಪಿ.ಆರ್. (563) ಶೇ.90.08 ಅಂಕಗಳ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಥೆರೆಸಿಯಾ ಸೆರಾ, ಅಧ್ಯಾಪಕ ವೃಂದ, ಪಾಲಕ-ಬೋಧಕರ ಸಮಿತಿ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.