ಉಳ್ಳಾಲ: ಎಸ್.ಐ.ಒ.ದಿಂದ 'ಚಿಲ್ಡ್ರನ್ಸ್ ಸಮ್ಮರ್ ಫೆಸ್ಟಿವಲ್'

Update: 2018-05-08 07:23 GMT

ಉಳ್ಳಾಲ, ಮೇ 8: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗೈನೆಝೇಶನ್ ಆಫ್ ಇಂಡಿಯಾ (ಎಸ್.ಐ.ಒ.) ಉಳ್ಳಾಲ ಘಟಕದ ವತಿಯಿಂದ ಮಕ್ಕಳಿಗಾಗಿ 'ಚಿಲ್ಡ್ರನ್ಸ್ ಸಮ್ಮರ್ ಫೆಸ್ಟಿವಲ್' ಬೇಸಿಗೆ ಶಿಬಿರ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಎಸ್.ಐ.ಒ. ಉಳ್ಳಾಲ ಘಟಕದ ಅಧ್ಯಕ್ಷ ಅಶೀರುದ್ದೀನ್ ಆಲಿಯಾ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಹ್ಮತುಲ್ಲಾ ದಮ್ಮಾಮ್, "ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಹುಡುಕಬೇಕು. ಹೆತ್ತವರನ್ನು ಗುರು ಹಿರಿಯರಿಯರನ್ನು ಗೌರವಿಸುವವರಾಗಬೇಕು" ಎಂದರು.

ಮಕ್ಕಳಿಗಾಗಿ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಸಮಾರೋಪವನ್ನು ಎಸ್.ಐ.ಒ. ದಕ್ಷಿಣ ಕನ್ನಡದ ಅಧ್ಯಕ್ಷ ತಲ್ಹಾ ಇಸ್ಮಾಯೀಲ್ ನೆರೆವೇರಿಸಿದರು. ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸಂಚಾಲಕ ಶಾಕಿಬ್ ಕಲ್ಲಾಪು, ತೊಕ್ಕೊಟ್ಟು ಘಟಕ ಅಧ್ಯಕ್ಷ ನಿಝಾಮ್ ಹಿರಾ ವೇಧಿಕೆಯಲ್ಲಿ ಉಪಸ್ಥಿತರಿದ್ದರು.

ಮುಶರಫ್ ಕಾರ್ಯಕ್ರಮ ನಿರೂಪಿಸಿದರು. ಸಯ್ಯಾಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News