×
Ad

ಮೇ 11,12ರ ಚುನಾವಣಾ ಜಾಹಿರಾತಿಗೆ ಅನುಮತಿ ಕಡ್ಡಾಯ

Update: 2018-05-08 19:57 IST

ಉಡುಪಿ, ಮೇ 8: ಪ್ರಸಕ್ತ ವಿಧಾನಸಭಾ ಚುನಾವಣೆ ಅಂಗವಾಗಿ ಮೇ 12 ರಂದು ಮತದಾನ ನಡೆಯುವ ದಿನದ 48 ಗಂಟೆಗಳ ಮುನ್ನ ಅಂದರೆ ಮೇ 10ರ ಸಂಜೆ 6 ಗಂಟೆಯಿಂದ ಚುನಾವಣಾ ಅ್ಯರ್ಥಿಗಳ ಜಾಹಿರಾತುಗಳು ಪ್ರಕಟಗೊಳ್ಳಬೇಕಿದ್ದರೆ ಅಂತಹ ಜಾಹಿರಾತಿಗೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯ ಪೂರ್ವಾನುಮತಿ ಪಡೆಯು ವುದು ಕಡ್ಡಾಯ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಯಾವುದೇ ಪತ್ರಿಕೆಯಲ್ಲಿ ಮೇ 11 ಮತ್ತು 12ರಂದು ಚುನಾವಣಾ ಜಾಹಿರಾತು ಪ್ರಕಟಿಸಲು ಬಯಸುವ ಅಭ್ಯರ್ಥಿಗಳು ಜಾಹಿರಾತು ನೀಡುವ ವಿಷಯ ಗಳೊಂದಿಗೆ ಎರಡು ಸ್ವಯಂ ಧೃಢೀಕೃತ ಪ್ರತಿಗಳೊಂದಿಗೆ ನಿಗದಿತ ನಮೂನೆಯಲ್ಲಿ ಮೇ 9 ರೊಳಗಾಗಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯ ಪೂರ್ವಾನುಮತಿ ಪಡೆಯಬೇಕು.

ಪ್ರಮಾಣ ಪತ್ರ ಪಡೆಯದೆ 48 ಗಂಟೆಗಳ ಮೊದಲು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯಿದೆ-1951ರ ಕಲಂ 126 ರ ಪ್ರಕಾರ ನಿಷೇಧಿಸಲಾಗಿದೆ.

ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ವಿಷಯಗಳನ್ನು ಟಿವಿ, ರೇಡಿಯೋ, ಕೇಬಲ್ ನೆಟ್‌ವರ್ಕ್ ಮತ್ತು ಎಲ್ಲ ಡಿಜಿಟಲ್ ಮಾಧ್ಯಮಗಳು ಮತದಾನ ಪೂರ್ವ 48 ಗಂಟೆಗಳ ಅವಧಿಯಲ್ಲಿ ಪ್ರಸಾರ ಮಾಡುವಂತಿಲ್ಲ. ಚುನಾವಣೋತ್ತರ ಸಮೀಕ್ಷೆ ಗಳನ್ನು ಪ್ರಸಾರ ಮಾಡುವಂತಿಲ್ಲ.

ಚುನಾವಣಾ ಫಲಿತಾಂಶದ ಮೇಲೆ ಪ್ರಾಭವ ಬೀರುವ ವಿಷಯಗಳನ್ನು ಟಿವಿ, ರೇಡಿಯೋ, ಕೇಬಲ್‌ನೆಟ್‌ವರ್ಕ್‌ ಮತ್ತು ಎಲ್ಲ ಡಿಜಿಟಲ್‌ ಮ್ಯಾಮಗಳು ಮತದಾನ ಪೂರ್ವ 48 ಗಂಟೆಗಳ ಅವಧಿಯಲ್ಲಿ ಪ್ರಸಾರ ಮಾಡುವಂತಿಲ್ಲ. ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವಂತಿಲ್ಲ. ಮೇ12ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಎಲ್ಲಾ ಮಾಧ್ಯಮಗಳು ಚುನಾವಣಾ ಆಯೋಗದ ನಿರ್ದೇಶನವನ್ನು ಮೇ 10ರಿಂದ 12ರವರೆಗೆ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಚುನಾವಣೆ ಸುಗಮವಾಗಿ ಹಾಗೂ ನ್ಯಾಯಯುತವಾಗಿ, ನಿರ್ಭೀತವಾಗಿ ನಡೆಸಲು ನೆರವಾಗಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News