×
Ad

ನಾಗ್ಪುರದ ಆರೆಸ್ಸೆಸ್ ಸ್ಮಾರಕಕ್ಕೆ ಪ್ರವಾಸೋದ್ಯಮ ಸ್ಥಾನಮಾನ

Update: 2018-05-08 20:03 IST

ನಾಗ್ಪುರ,ಮೇ 8: ಮಹಾರಾಷ್ಟ್ರ ಸರಕಾರವು ನಾಗ್ಪುರದಲ್ಲಿರುವ ಆರೆಸ್ಸೆಸ್ ಸ್ಥಾಪಕ ಡಾ.ಕೇಶವ ಬಲಿರಾಮ ಹೆಡ್ಗೆವಾರ್ ಅವರ ಸ್ಮಾರಕಕ್ಕೆ ಸಿ-ದರ್ಜೆಯ ಪ್ರವಾಸೋದ್ಯಮ ಸ್ಥಾನಮಾನವನ್ನು ನೀಡಿದೆ. ಸ್ಮೃತಿ ಮಂದಿರ ಎಂದು ಜನಪ್ರಿಯವಾಗಿರುವ ಈ ಸ್ಮಾರಕವು ಆರೆಸ್ಸೆಸ್‌ನ ಕೇಂದ್ರ ಕಚೇರಿಯಲ್ಲಿದೆ.

ರೇಷಿಮ್‌ಬಾಗ್ ಸ್ಮೃತಿ ಮಂದಿರವನ್ನು ಪ್ರವಾಸಿ ತಾಣವಾಗಿ ಮೇಲ್ದರ್ಜೆಗೇರಿಸುವಂತೆ ನಾಗ್ಪುರ ಬಿಜೆಪಿ ಉಪಾಧ್ಯಕ್ಷ ಭೂಷಣ ದಾವ್ಡೆ ಅವರು ಕಳೆದ ವರ್ಷ ಸರಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿದ್ದರು.

1925ರಲ್ಲಿ ಮಹಾಲ್‌ನಲ್ಲಿ ಇತರ ನಾಲ್ವರೊಂದಿಗೆ ಸೇರಿಕೊಂಡು ಆರೆಸ್ಸೆಸ್‌ನ್ನು ಸ್ಥಾಪಿಸಿದ್ದ ಹೆಡ್ಗೆವಾರ್ ಅವರು 1940,ಜೂ.21ರಂದು ನಿಧನರಾಗಿದ್ದರು. ಅವರ ಅಂತ್ಯಸಂಸ್ಕಾರವನ್ನು ರೇಷಿಮ್‌ಬಾಗ್‌ನಲ್ಲಿ ನಡೆಸಲಾಗಿತ್ತು.

ಮಹಾರಾಷ್ಟ್ರ ಸರಕಾರವು ಸ್ಮತಿ ಮಂದಿರವನ್ನು ‘ನಾಗ್ಪುರ ದರ್ಶನ’ಪಟ್ಟಿಯಲ್ಲಿ ಸೇರಿಸಿದ್ದು,ಸ್ಥಳೀಯ ಮಹಾನಗರ ಪಾಲಿಕೆಯು ತನ್ನ 2017-18ರ ಬಜೆಟ್‌ನಲ್ಲಿ ಸ್ಮತಿ ಭವನ ಮತ್ತು ಬಾಳಾಸಾಹೇಬ ದೇವರಸ್ ಪಥ್ ತ್ರಿವೇಣಿ ಸ್ಮಾರಕದ ಅಭಿವೃದ್ಧಿಗೆ ಮೂರು ಕೋ.ರೂ.ಗಳನ್ನು ಹಂಚಿಕೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News