×
Ad

ರಮಝಾನ್ ದೇವಭಕ್ತಿ ಹೆಚ್ಚಿಸುವ ತಿಂಗಳು: ಮೌಲಾನಾ ಇಬ್ರಾಹೀಂ

Update: 2018-05-08 21:01 IST

ಕಾಪು, ಮೇ 8: ಮಾನವರಲ್ಲಿ ದೇವಭಕ್ತಿಯನ್ನು ಹೆಚ್ಚಿಸಿ, ಅವರನ್ನು ತರಬೇತಿ ಗೊಳಿಸಲು ಬರುವ ತಿಂಗಳೇ ರಮಝಾನ್. ಅದನ್ನು ಗೌರವಾದಾರದೊಂದಿಗೆ ಪ್ರತಿಯೊಬ್ಬರು ಸ್ವಾಗತಿಸಬೇಕು ಎಂದು ಮೌಲಾನಾ ಇಬ್ರಾಹೀಂ ಸಈದ್ ಉಮರಿ ಹೇಳಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲ ಇದರ ವತಿಯಿಂದ ಕೊಂಬ ಗುಡ್ಡೆ ಜಾಮಿಯಾ ಮಸ್ಜಿದ್ ಜದೀದೆ ಕಲಾನ್‌ನಲ್ಲಿ ಹಮ್ಮಿಕೊಂಡ ರಮಝಾನ್ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಓರ್ವ ಮನುಷ್ಯನನ್ನು ಸಂಪೂರ್ಣವಾಗಿ ಬದಲಾಯಿಸಿ ದೇವಭಯ ದೊಂದಿಗೆ ಜೀವನ ಸಾಗಿಸಲು ಕುರ್‌ಆನ್ ಮತ್ತು ರಮಝಾನ್ ತಿಂಗಳ ಉಪ ವಾಸ ಪ್ರೇರೇಪಿಸುತ್ತದೆ. ಇಸ್ಲಾಮ್ ಸ್ವೀಕಾರಕ್ಕೆ ಮುಂಚೆ ಅನಾಗರಿಕನಾಗಿದ್ದು, ತನ್ನ ತಂದೆಯಿಂದ ಒಂದು ಒಂಟೆ ಮೇಯಿಸಲು ಅನರ್ಹನೆಂದು ಕರೆಯಿಸ ಲ್ಪಟ್ಟ ಉಮರ್(ರ) ಇಸ್ಲಾಮ್ ಸ್ವೀಕಾರದ ನಂತರ ವಿಶ್ವದ ಅರ್ಧದಷ್ಟು ಭಾಗದ ಸಾಮ್ರಾಜ್ಯ ದೇವಭಯದೊಂದಿಗೆ, ಒಂದೇ ಒಂದು ಪ್ರಜೆಗೆ ಹಾಗೂ ಪ್ರಾಣಿ ಗಳಿಗೂ ಸಂಕಷ್ಟ ಒದಗದಂತೆ ಆಳಿದ ವಿಷಯವು ಚರಿತ್ರೆಯಲ್ಲಿ ಉಲ್ಲೇಖವಿದೆ ಎಂದು ಅವರು ತಿಳಿಸಿದರು.

ಧರ್ಮಗುರು ಮೌಲಾನಾ ಮುಹಮ್ಮದ್ ಪರ್ವೇಝ್ ಆಲಮ್ ನದ್ವಿ ಕುರ್‌ಆನ್ ಪಠಿಸಿದರು. ಮುಹಮ್ಮದ್ ಮುಯೀಸ್ ಹಮ್ದ್ ಹಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಸ್ವಾಗತಿಸಿ ಪ್ರಸ್ತಾವನೆಗೈದರು. ಮುಹಮ್ಮದ್ ಇಕ್ಬಾಲ್ ಸಾಹೇಬ್ ಕಾರ್ಯ ಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News