×
Ad

ಫರಂಗಿಪೇಟೆ: ಕಾಂಗ್ರೆಸ್ ಅಭ್ಯರ್ಥಿ ಯು.ಟಿ ಖಾದರ್ ಪರ ಪ್ರಚಾರ ಸಭೆ, ಕಾರ್ಯಕರ್ತರ ಸಮಾವೇಶ

Update: 2018-05-08 21:18 IST

ಬಂಟ್ವಾಳ, ಮೇ 8: ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ ಖಾದರ್ ಅವರ ಪರ ಪ್ರಚಾರ ಸಭೆ ಹಾಗೂ ಕಾರ್ಯಕರ್ತರ ಸಮಾವೇಶ ಪುದು ಗ್ರಾಮದ ಫರಂಗಿಪೇಟೆ ಜಂಕ್ಷನ್‌ನಲ್ಲಿ ಸೋಮವಾರ ರಾತ್ರಿ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಯು.ಟಿ ಖಾದರ್ ಅವರು ಸಾರ್ವಜನಿಕರೊಂದಿಗೆ ಮತಯಾಚಿಸಿದರು.

ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಜಿಲ್ಲಾ ಉಸ್ತುವಾರಿ ವೀಕ್ಷಕರಾದ ಎಫ್ ಉಮರ್ ಫಾರೂಕ್ ಫರಂಗಿಪೇಟೆ ಮಾತನಾಡಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಮಹಮ್ಮದ್ ಮೋನು, ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಫರಂಗಿಪೇಟೆ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ, ಪುದು ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮೀ, ಗ್ರಾಪಂ ಸದಸ್ಯರಾದ ಇಕ್ಬಾಲ್ ಸುಜೀರ್, ಮುಹಮ್ಮದ್ ಫರಂಗಿಪೇಟೆ, ಭಾಸ್ಕರ್ ರೈ, ಝಾಹೀರ್ ಅಬ್ಬಾಸ್, ರಿಯಾಝ್ ಕುಂಪನಮಜಲ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್, ಮುಡಿಪು ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಎಂ.ಕೆ ಮುಹಮ್ಮದ್, ಶೌಕತ್ ಅಲಿ, ಹಿಶಾಂ ಫರಂಗಿಪೇಟೆ, ಮಜೀದ್ ಪೇರಿಮಾರ್, ಇಸ್ಮಾಯಿಲ್, ಶರೀಫ್ ಮಜಪೆ, ಮಜೀದ್ ಫರಂಗಿಪೇಟೆ, ಇಬ್ರಾಹಿಂ ಕುಂಪನಮಜಲ್, ಲತೀಫ್ ಮಲಾರ್, ಸಲ್ಮಾನ್ ಫರಂಗಿಪೇಟೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಾಶೀರ್ ಪೇರಿಮಾರ್ ಸ್ವಾಗತಿಸಿ, ರಫೀಕ್ ಪೆರಿಮಾರ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News