×
Ad

ಎಸೆಸೆಲ್ಸಿ: ದ.ಕ. ಜಿಲ್ಲೆಯಲ್ಲಿ ಮೂಡುಬಿದಿರೆ ತಾಲೂಕು ಏಳನೇ ಬಾರಿ ಪ್ರಥಮ

Update: 2018-05-08 22:04 IST

ಮೂಡುಬಿದಿರೆ, ಮೇ 8: ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ತಾಲೂಕು ಶೈಕ್ಷಣಿಕ ವಲಯ ದ.ಕ. ಜಿಲ್ಲೆಯಲ್ಲಿ 7ನೇ ಬಾರಿ ಪ್ರಥಮ ಸ್ಥಾನ ಗಳಿಸಿದೆ. ಪರೀಕ್ಷೆಗೆ ಹಾಜರಾದ 2155 ವಿದ್ಯಾರ್ಥಿಗಳ ಪೈಕಿ 1963 ಮಂದಿ ಪಾಸಾಗಿದ್ದಾರೆ. ಇವರಲ್ಲಿ 813 ಮಂದಿ ಡಿಸ್ಟಿಂಕ್ಷನ್, 484 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

100 ಶೇ. ಫಲಿತಾಂಶ :

ತಾಕೊಡೆ ಆದರ್ಶ (ಅನುದಾನಿತ), ಮೂಡಬಿದಿರೆ ರೋಟರಿ ಆ.ಮಾ., ದಿಗಂಬರ ಜೈನ ಆ.ಮಾ., ಕೋಟೆಬಾಗಿಲು ಮಹಮ್ಮದೀಯ ಆ.ಮಾ., ಎಕ್ಸಲೆಂಟ್ ಆ.ಮಾ. ಹಾಗೂ ಬೆಳುವಾಯಿ ಬ್ಲೋಸಂ ಆ.ಮಾ. ಶಾಲೆಗಳು (ಎಲ್ಲವೂ ಅನುದಾನರಹಿತ)100 ಶೇ. ಫಲಿತಾಂಶ ಸಾಧಿಸಿವೆ.

ಶಾಲಾವಾರು ಫಲಿತಾಂಶ

ಸರಕಾರಿ ಶಾಲೆಗಳು: ಪ್ರಾಂತ್ಯ (ಶೇ. 90) ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆ ( 87.88), ಪಡುಕೋಣಾಜೆ (ಶೇ.86.96), ನೆಲ್ಲಿಕಾರು (85.71), ಅಳಿಯೂರು (86.96), ದರೆಗುಡ್ಡೆ (78.95),ನೀರ್ಕೆರೆ (86.11), ಮೂಡುಮಾರ್ನಾಡು (ಶೇ. 75), ಮಿಜಾರು (68.89) ಹೊಸಬೆಟ್ಟು ( ಶೇ. 68.42) ಫಲಿತಾಂಶ ಪಡೆದಿವೆ.

 ಅನುದಾನಿತ: ಶಿರ್ತಾಡಿ ಜವಹರಲಾಲ್ ನೆಹರೂ (93.75), ಮೂಡಬಿದಿರೆ ಜೈನ ಪ್ರೌಢಶಾಲೆ (85.), ಪ್ರತ31), ಬಾಬುರಾಜೇಂದ್ರ ಪ್ರಸಾದ್ (84), ಎಸ್‌ಎಂಪಿ ಬೆಳುವಾಯಿ (80.65) ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ (73.33), ನೀರುಡೆ ಮುಕ್ತಿಪ್ರಕಾಶ (72.50) , ಮೂಡಬಿದಿರೆ ಹೋಲಿರೋಸರಿ (70.18), ಕಲ್ಲಮುಂಡ್ಕೂರು ಸರ್ವೋದಯ (69.57)

ಅನುದಾನರಹಿತ: ಅಲಂಗಾರು ಸೈ. ಥಾಮಸ್ (98.70), ಆಳ್ವಾಸ್ ಕನ್ನಡ ಮಾಧ್ಯಮ (98.06), ಶಿರ್ತಾಡಿ ಮೌಂಟ್ ಕಾರ್ಮೆಲ್ ಆ.ಮಾ. (96.97), ಆಳ್ವಾಸ್ ಆ.ಮಾ. (96.66), ನಿಡ್ಡೋಡಿ ದುರ್ಗಾದೇವಿ ಆ.ಮಾ. (93. 75), ಸರಸ್ವತಿ ಇರುವೈಲು (75) ಫಲಿತಾಂಶ ಗಳಿಸಿವೆ.

ವೈಯಕ್ತಿಕ ಅಂಕಗಳಿಕೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಆಳ್ವಾಸ್‌ನ ಸುಧನ್ವ (619), ಶಶಾಂಕ್( 618), ಸಂತೋಷ್ (617), ಪ್ರದೀಪ್ (616), ಆನಂದ್ (612), ಗುರಮೂರ್ತೋ ಚಂದ್ರಶೇಖರ ಹೆಗ್ಡೆ (611), ಸಮ್ಮೇದ್ ಮಹಾವೀರ (609), ಭಾಗ್ಯಲಕ್ಷ್ಮಿ (607), ಶುಶಾಚಿತ್ (607), ಸಮ್ಮೇದ್ ಕುಮಾರ್ ಉದ್ದಾರ್ (605) ಮೊದಲ ಹತ್ತು ಸ್ಥಾನಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News