×
Ad

​ವೋಟರ್ ಸ್ಲಿಪ್ ಪಡೆಯಲು ಸೂಚನೆ

Update: 2018-05-08 22:53 IST

ಮಂಗಳೂರು, ಮೇ 8: ಭಾರತ ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಚುನಾವಣೆ ಬಾಬ್ತು ಮತದಾರರಿಗೆ ವಿತರಿಸುವ ಬಗ್ಗೆ ನೀಡಲಾದ ಭಾವಚಿತ್ರವಿರುವ ವೋಟರ್ ಸ್ಲಿಪ್‌ಗಳನ್ನು ಈಗಾಗಲೇ ಮತದಾರರಿಗೆ ವಿತರಿಸುತ್ತಿದ್ದಾರೆ. ವೋಟರ್ ಸ್ಲಿಪ್‌ನ್ನು ವಿತರಿಸಲು ಕೊನೆಯ ದಿನವಾದ ಮೇ 9 ಮಧ್ಯಾಹ್ನ 3 ಗಂಟೆಯವರೆಗೆ ಮತದಾರರ ಮನೆಗಳನ್ನು ಸಂದರ್ಶಿಸಿ ವೋಟರ್ ಸ್ಲಿಪ್‌ಗಳನ್ನು ಬೂತ್ ಮಟ್ಟದ ಅಧಿಕಾರಿಗಳು ವಿತರಿಸಲಿದ್ದಾರೆ.

ಮತದಾರರಿಗೆ ವೋಟರ್ ಸ್ಲಿಪ್ ವಿತರಣೆಯಾಗದಿದ್ದಲ್ಲಿ ಅದನ್ನು ಪಡೆಯಲು ಮೇ 9 ಮಧ್ಯಾಹ್ನ 3 ಗಂಟೆಯ ನಂತರ ಸಂಬಂಧಪಟ್ಟ ಮತಗಟ್ಟೆಗಳಲ್ಲಿ (ಬೂತುಗಳಲ್ಲಿ) ಹಾಜರಿರುವ ಬೂತ್ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸಿ ಅವರವರ ವೋಟರ್ ಸ್ಲಿಪ್‌ನ್ನು ಪಡೆಯಬಹುದು ಎಂದು ಜಿಲ್ಲಾ ಚುನಾವಣಾಧಿ ಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News