×
Ad

ಕಾಬೂಲ್ ನಲ್ಲಿ ಸರಣಿ ಬಾಂಬ್ ಸ್ಫೋಟ, ಗುಂಡಿನ ದಾಳಿ

Update: 2018-05-09 14:48 IST

ಕಾಬೂಲ್, ಮೇ 9: ಇಲ್ಲಿನ ಪೊಲೀಸ್ ಠಾಣೆಗಳ ಮೇಲೆ ಆತ್ಮಾಹುತಿ ಬಾಂಬರ್ ಗಳು ಹಾಗು ಗನ್ ಮ್ಯಾನ್ ಒಬ್ಬ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಅಫ್ಘಾನ್ ರಾಜಧಾನಿ ಕಾಬೂಲ್ ನಲ್ಲಿ ಗುಂಡಿನ ದಾಳಿ ನಡೆದ ನಂತರ ಬಾಂಬ್ ದಾಳಿ ನಡೆಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದ ಪೂರ್ವ ಭಾಗದಲ್ಲಿ ನಡೆದ ಮೊದಲ ದಾಳಿಯಲ್ಲಿ ಪೊಲೀಸ್ ಠಾಣೆಯ ಮುಂಭಾಗ ಆತ್ಮಾಹುತಿ ಬಾಂಬರ್ ಒಬ್ಬ ತನ್ನನ್ನೇ ತಾನು ಸ್ಫೋಟಿಸಿಕೊಂಡ. ಈ ಸಂದರ್ಭ ಭಯೋತ್ಪಾದಕರು ಹಾಗು ಪೊಲೀಸರ ನಡುವೆ ಗುಂಡಿನ ದಾಳಿ ನಡೆಯಿತು.

ಕೇಂದ್ರ ಕಾಬೂಲ್ ನಲ್ಲಿ 2ನೆ ದಾಳಿ ನಡೆಯಿತು ಎನ್ನಲಾಗಿದೆ. ಪೊಲೀಸ್ ಕಾಂಪೌಂಡ್ ಗೆ ನುಗ್ಗಿದ ಇಬ್ಬರು ಭಯೋತ್ಪಾದಕರನ್ನು  ಹೊಡೆದುರುಳಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News