×
Ad

ಬಂಟ್ವಾಳ: ವಸತಿ ಗೃಹಕ್ಕೆ ಐಟಿ ದಾಳಿ; ನಗದು, ಸೊತ್ತು ವಶ

Update: 2018-05-09 20:48 IST

ಬಂಟ್ವಾಳ, ಮೇ 9: ಬಿ.ಸಿ.ರೋಡಿನ ವಸತಿ ಗೃಹವೊಂದಕ್ಕೆ ಮಂಗಳವಾರ ತಡರಾತ್ರಿ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಗದು ಸಹಿತ ಸೊತ್ತು ವಶಪಡಿಸಿಕೊಂಡ ಬಗ್ಗೆ ಮಾಹಿತಿ ದೊರಕಿದೆ.

ಇಲ್ಲಿನ ವಸತಿ ಗೃಹದಲ್ಲಿ ರಾಜಕೀಯ ಪಕ್ಷವೊಂದು 10 ಕೊಠಡಿಗಳನ್ನು ಬಾಡಿಗೆಗೆ ಪಡೆಯಲಾಗಿದ್ದು, ಕೊಠಡಿಗಳಲ್ಲಿ ಚುನಾವಣೆ ಸಂಬಂಧಿ ಹಣ ದಾಸ್ತಾನು ಇರಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಲಕ್ಷಾಂತರ ರೂ. ಮೊತ್ತದ ನಗದು ವಶಪಡಿಸಿಕೊಂಡಿದ್ದು, ಏಳು ಕೊಠಡಿಗಳಿಗೆ ಬೀಗ ಜಡಿದಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಬೆನ್ನಲ್ಲೇ ವಿವಿಧೆಡೆ ಐಟಿ ದಾಳಿಯಾಗಿದೆ ಎಂಬ ವದಂತಿಗಳು ಹಬ್ಬಿದ್ದವು. ಬುಧವಾರ ಸಂಜೆ ವೇಳೆಗೆ ಮೆಲ್ಕಾರ್‌ನ ಹೊಟೇಲ್‌ವೊಂದಕ್ಕೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಕ್ಷೇತ್ರ ಚುನಾವಣಾ ಪ್ಲೈಯಿಂಗ್ ಸ್ಕ್ಯಾಡ್‌ನ ಅಧಿಕಾರಿಗಳು ದಾಳಿ ನಡೆಸಿ, ತಪಾಸಣೆ ನಡೆಸಿದ್ದು, ಬರಿಗೈಯಲ್ಲಿ ಮರಳಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ಪಷ್ಟ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News