×
Ad

ಪುತ್ತೂರು: ಬಿಜೆಪಿಯಿಂದ ರೋಡ್‌ಶೋ

Update: 2018-05-09 22:19 IST

ಪುತ್ತೂರು, ಮೇ 9: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪುತ್ತೂರು ನಗರದಲ್ಲಿ ಬಿಜೆಪಿಯಿಂದ ರೋಡ್ ಶೋ ನಡೆಯಿತು.

ನಗರದ ಬೊಳುವಾರ ಆಂಜನೇಯ ಮಂತ್ರಾಲಯದ ಬಳಿಯಲ್ಲಿ ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ ಡಾ. ಮಹೇಂದ್ರ ಸಿಂಗ್ ಪಕ್ಷದ ಧ್ವಜವನ್ನು ಹಿರಿಯ ಕಾರ್ಯಕರ್ತ ಗೋಪಾಲ್ ನಾಯ್ಕಿ ಅವರಿಗೆ ಹಸ್ತಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೊಳವಾರಿನಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ದರ್ಬೆಯ ತನಕ ರೋಡ್ ಶೋ ನಡೆಸಲಾಯಿತು. ಪಕ್ಷದ ಅಭ್ಯರ್ಥಿ ಸಂಜೀವ ಮಠಂದೂರು, ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ ಸುನಿಲ್ ದಡ್ಡು, ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಸಹಜ್ ರೈ ಬಳೆಜ್ಜ, ವಿಶ್ವೇಶ್ವರ ಬಟ್ ಬಂಗಾರಡ್ಕ, ಗೋಪಾಲಕೃಷ್ಣ ಹೇರಳೆ, ರಾಜೇಶ್ ಬನ್ನೂರು, ಜೀವಂಧರ್ ಜೈನ್,ಪಕ್ಷದ ವಕ್ತಾರ ಆರ್.ಸಿ. ನಾರಾಯಣ ಸೇರಿದಂತೆ ಹಲವಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News