ಕಚ್ಚಾತೈಲಗಳ ಬೆಲೆಏರಿಕೆ ಮುಂದುವರಿದರೆ ಭಾರತೀಯ ಆರ್ಥಿಕತೆಗೆ ಹೆಚ್ಚಿನ ಅಪಾಯ

Update: 2018-05-09 16:50 GMT

ಹೊಸದಿಲ್ಲಿ,ಮೇ 9: ಜಾಗತಿಕ ಕಚ್ಚಾತೈಲಗಳ ಬೆಲೆಗಳಲ್ಲಿಯ ಹೆಚ್ಚಳ ಸುದೀರ್ಘ ಅವಧಿಗೆ ಮುಂದುವರಿಯುವ ಬಲವಾದ ಸಾಧ್ಯತೆಯಿದ್ದು,ಇದು ಭಾರತದ ಆರ್ಥಿಕತೆಗೆ ಹೊಡೆತ ನೀಡುವ ಮತ್ತು ಹಣದುಬ್ಬರವನ್ನು ಹೆಚ್ಚಿಸುವ ಬೆದರಿಕೆಯನ್ನುಂಟು ಮಾಡಿದೆ.

 ಸರಕಾರವು ಯಾವುದೇ ನೀತಿಯನ್ನು ರೂಪಿಸುವ ಮುನ್ನ ಕಚ್ಚಾತೈಲ ಬೆಲೆಗಳ ಮೇಲೆ ನಿಗಾ ಇರಿಸಬೇಕಾಗುತ್ತದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಯೋರ್ವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅಮೆರಿಕವು ಇರಾನ್ ಮೇಲೆ ಪುನಃ ಆರ್ಥಿಕ ನಿರ್ಬಂಧಗಳನ್ನು ಹೇರಿರುವುದರಿಂದ ಆ ದೇಶದಿಂದ ತೈಲಪೂರೈಕೆಗೂ ಬಾಧೆ ತಟ್ಟುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ಬ್ರೆಂಟ್ ಕಚ್ಚಾತೈಲದ ಬೆಲೆ ಬುಧವಾರ ಶೇ.3.1ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 77.20 ಡಾ.ಗೆ ತಲುಪಿದ್ದು,ಇದು 2014,ನವೆಂಬರ್‌ನಿಂದೀಚಿಗೆ ಸರ್ವಾಧಿಕ ವಾಗಿದೆ. ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ 78 ಡಾ.ಗೆ ತಲುಪಿದರೆ 2018-19ನೇ ಸಾಲಿಗೆ ಅಂದಾಜಿಲಾಗಿರುವ ಶೇ.7.4 ಜಿಡಿಪಿ ಬೆಳವಣಿಗೆ ದರವು 10 ಮೂಲ ಅಂಕಗಳನ್ನು ಕಳೆದುಕೊಳ್ಳಲಿದೆ ಎಂದು ಆರ್‌ಬಿಐ ಲೆಕ್ಕ ಹಾಕಿದೆ.

ಭಾರತವು ತನ್ನ ಕಚ್ಚಾತೈಲ ಅಗತ್ಯದ ಶೇ.66ಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಡಾಲರ್‌ನೆದುರು ರೂಪಾಯಿ ದುರ್ಬಲಗೊಂಡಿ ರುವುದು ಭಾರತದ ಚಾಲ್ತಿ ಖಾತೆ ಕೊರತೆಯನ್ನು ಇನ್ನಷ್ಟು ಹದಗೆಡಿಸಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News