ಬ್ಯಾಂಕ್ ಖಾತೆಯ ಲಕ್ಷಾಂತರ ರೂ. ವಂಚನೆ: ದೂರು
Update: 2018-05-09 22:41 IST
ಉಡುಪಿ, ಮೇ 9: ಸೌದಿ ಅರೇಬಿಯಾದ ಉದ್ಯೋಗಿಯ ಮಣಿಪಾಲ ಐಸಿಐಸಿಐ ಬ್ಯಾಂಕಿನ ಖಾತೆಯಿಂದ ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
ಕಲ್ಮಾಡಿಯ ಫ್ರಾಂಕ್ಲೀನ್ ಮೇನೆಜಸ್ ಎಂಬವರ ಪುತ್ರ ಆಸ್ಕರ್ ನಿಕ್ಸನ್ ಮಾರ್ಟಿನ್ ಮೇನೆಜಸ್ ಎಂಬವರು ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದು, ಮೇ 5ರಂದು ಅವರು ಅಪರಿಚಿತರ ಇಮೇಲ್ ಸ್ವೀಕರಿಸಿದ್ದರು. ಈ ಮೂಲಕ ದುಷ್ಕರ್ಮಿಗಳು ಆಸ್ಕರ್ ನಿಕ್ಸನ್ ಅವರ ಬ್ಯಾಂಕ್ ವಿವರಗಳನ್ನು ಪಡೆದುಕೊಂಡು ಮೇ 7ರಂದು ಅವರ ಬ್ಯಾಂಕ್ ಖಾತೆಯಿಂದ 1,86,675 ರೂ. ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.