ಮೂಡುಬಿದಿರೆ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
Update: 2018-05-09 22:43 IST
ಮೂಡುಬಿದಿರೆ, ಮೇ 9: ಆರುದಿನಗಳ ಹಿಂದೆ ನಾಪತ್ತೆಯಾಗಿದ್ದ ಪುರಸಭಾ ವ್ಯಾಪ್ತಿಯ ಕೊಡಂಗಲ್ಲು ಪರಿಸರದ ಮಾತೃಛಾಯಾ ನಿವಾಸಿ ಸಸೀಂದ್ರ (43) ಅವರು ಮನೆಯ ಹತ್ತಿರ ಇರುವ ಜನರ ಓಡಾಟವಿಲ್ಲದ ಜಾಗದಲ್ಲಿರುವ ಮೋರಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮನೆಯವರು ಸಸೀಂದ್ರ ಅವರ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಕೊಳೆತ ವಸ್ತುವಿನ ದುರ್ವಾಸನೆ ಹರಡುತ್ತಿರುವುದನ್ನು ಗಮನಿಸಿ ಮತ್ತೆ ಹುಡುಕಾಟ ನಡೆಸಿದಾಗ ಕೆಲವು ದಿನಗಳ ಹಿಂದೆಯೇ ಮೃತಪಟ್ಟಿರಬಹುದಾದ ಶವ ಪತ್ತೆಯಾಯಿತು. ಸಸೀಂದ್ರ ಅವರ ಸಹೋದರ ಸುರೇಶ್ ನೀಡಿದ ದೂರಿನ ಮೇರೆಗೆ ಇದೊಂದು ಅಸಹಜ ಸಾವು ಎಂದು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.