ಜಕಾರ್ತ ಜೈಲಿನಲ್ಲಿ ಗಲಭೆ: 5 ಪೊಲೀಸರ ಸಾವು
Update: 2018-05-09 23:33 IST
ಜಕಾರ್ತ, ಮೇ 9: ಇಂಡೋನೇಶ್ಯ ರಾಜಧಾನಿ ಜಕಾರ್ತ ಸಮೀಪದ ನಗರವೊಂದರ ಪೊಲೀಸ್ ಬಂಧನ ಕೇಂದ್ರವೊಂದರಲ್ಲಿ ನಡೆದ ಗಲಭೆಯಲ್ಲಿ ಐವರು ಪೊಲೀಸರು ಮತ್ತು ಓರ್ವ ಕೈದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
ಜಕಾರ್ತದ ದಕ್ಷಿಣ ಹೊರವಲಯದ ಡೆಪಾಕ್ ನಗರದಲ್ಲಿ ದೊಂಬಿ ಸಂಭವಿಸಿದೆ. ಇಲ್ಲಿ ನಾಲ್ಕು ದಿನಗಳ ಹಿಂದೆ ಪೊಲೀಸರು ಮೂವರು ಭಯೋತ್ಪಾದಕರನ್ನು ಬಂಧಿಸಿದ್ದರು.
ಜೈಲಿನಲ್ಲಿ ತನ್ನ ಹೋರಾಟಗಾರರು ಮತ್ತು ಭಯೋತ್ಪಾದನೆ ನಿಗ್ರಹ ದಳದ ನಡುವೆ ಹೋರಾಟ ನಡೆದಿದೆ ಎಂದು ಐಸಿಸ್‌ನ ಸುದ್ದಿ ಸಂಸ್ಥೆ ‘ಅಮಕ್’ ವರದಿ ಮಾಡಿದೆ.