ಕಾಂಗ್ರೆಸ್ ಬೆಂಬಲಕ್ಕೆ ದಸಂಸ ನಿರ್ಣಯ

Update: 2018-05-10 10:58 GMT

ಮಂಗಳೂರು, ಮೇ 10: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಮಿತಿ ನಿರ್ಣಯದಂತೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ರಾಜ್ಯ ಸಮಿತಿ ನಿರ್ಧರಿಸಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್ ತಿಳಿಸಿದರು.

ರಾಜ್ಯ ಸಮಿತಿ ನಿರ್ಣಯದಂತೆ ದ.ಕ. ಜಿಲ್ಲೆಯಲ್ಲೂ ದಲಿತರ ಹಿತ, ಸಾಮಾಜದ ಸ್ವಾಸ್ಥ್ಯ ಕಾಪಾಡುವ ಹಾಗೂ ಸರ್ವಧರ್ಮದ ಸಹಬಾಳ್ವೆಯ ಹಿತದೃಷ್ಟಿಯಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಸಿ, ಜೆಡಿಎಸ್ ಮತ್ತು ಕೋಮುವಾದಿ ಬಿಜೆಪಿ ಅಕಾರ ಚುಕ್ಕಾಣಿ ಹಿಡಿಯುವುದನ್ನು ತಪ್ಪಿಸಬೇಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬಂದರೆ ಕೋಮು ಸಾಮರಸ್ಯ ಹದಗೆಡಲಿದೆ. ಅಹಿಂದ ಸಮುದಾಯದ ಜನರು ನೆಮ್ಮದಿಯ ಜೀವನ ನಡೆಸುವುದು ಕಷ್ಟಕರವಾಗುವ ಸಾಧ್ಯತೆ ಇದೆ. ಸಂವಿಧಾನದ ರಕ್ಷಣೆ, ದಲಿತ ಪರ ಯೋಜನೆಗಳ ಜಾರಿಗೆ ಸಿದ್ದರಾಮಯ್ಯ ಸರಕಾರವನ್ನು ಬೆಂಬಲಿಸಬೇಕಿದೆ ಎಂದರು.
ದಸಂಸ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರು, ಪದಾಧಿಕಾರಿಗಳಾದ ಸರೋಜಿನಿ ಬಂಟ್ವಾಳ, ಲಕ್ಷ್ಮಣ ಕಾಂಚನ್, ಗೀತಾ ಕರಂಬಾರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News