ಪಿಲಿಕುಳದಲ್ಲಿ ಭೂಮಿ ಸನಿಹಕ್ಕೆ ಬಂದ ಗುರು ಗ್ರಹದ ವೀಕ್ಷಣೆ

Update: 2018-05-10 11:40 GMT

ಮಂಗಳೂರು, ಮೇ 10: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಬುಧವಾರ ರಾತ್ರಿ ೂಮಿಯ ಸನಿಹ ಬಂದ ಗುರುವಿನ ವೀಕ್ಷಣೆಗೆ ವ್ಯವಸ್ಥೆಮಾಡಲಾಯಿತು.

ಈ ವಿದ್ಯಮಾನವು 399 ದಿನಗಳಿಗೊಮ್ಮೆ ನಡೆಯುತ್ತಿದ್ದು ಈ ಸಂದರ್ದಲ್ಲಿ ಗುರುಗ್ರಹ ಪ್ರಕಾಶಮಾನವಾಗಿ ಕಂಡುಬರುತ್ತದೆ. ವಿಜ್ಞಾನ ಕೇಂದ್ರದ ದೂರದರ್ಶಕದ ಮೂಲಕ ಗುರು ಗ್ರಹ, ಅದರ ಪಟ್ಟೆಗಳು, ಕೆಂಪು ಮಚ್ಚೆ ಹಾಗೂ ಅದರ ಉಪಗ್ರಹಗಳಾದ ಅಯೋ, ಯುರೋಪಾ, ಗೆನಿಮೀಡ್ ಮತ್ತು ಕೆಲಿಸ್ಟೋಗಳನ್ನು ವೀಕ್ಷಕರಿಗೆ ತೋರಿಸಿ ಜತೆಗೆ ಇತರ ನಕ್ಷತ್ರಗಳನ್ನು ಕೂಡ ಪರಿಚಯಸಲಾಯಿತು.

ವಿಜ್ಞಾನ ಕೇಂದ್ರದ ಕ್ಯುರೇಟರ್ ಜಗನ್ನಾಥ ವಿದ್ಯಮಾನದ ಕುರಿತು ಮಾಹಿತಿ ನೀಡಿದರು. ಶೈಕ್ಷಣಿಕ ಸಹಾಯಕ ಶರಣಯ್ಯ ಬರೀಗಣ್ಣಿನಿಂದ ಆಕಾಶ ಕಾಯಗಳ ವೀಕ್ಷಣೆ ಕುರಿತು ಮಾಹಿತಿ ನೀಡಿದರು. ಹವ್ಯಾಸಿ ಖಗೋಳ ಶಾಸ್ತ್ರಜ್ಞ ನವೀನಚಂದ್ರ, ಗೌರವ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News