ಸಿಪಿಎಂ ಪಕ್ಷವನ್ನು ಗೆಲ್ಲಿಸಲು ವಸಂತ ಆಚಾರಿ ಕರೆ
Update: 2018-05-10 17:30 IST
ಮಂಗಳೂರು, ಮೇ 10: ರಾಜ್ಯ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸಿಪಿಎಂ ಪಕ್ಷವು ರಾಜ್ಯದಲ್ಲಿ 19 ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದು ಆ ಪೈಕಿ ದ.ಕ.ಜಿಲ್ಲೆಯ ಮಂಗಳೂರು, ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ ಹಾಗೂ ಮೂಡುಬಿದಿರೆಯಲ್ಲಿ ಕಣದಲ್ಲಿರುವ ಪಕ್ಷದ ಅಭ್ಯರ್ಥಿಗಳಾದ ನಿತಿನ್ ಕುತ್ತಾರ್, ಕೆ.ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್ ಅವರನ್ನು ಅಧಿಕ ಮತದಿಂದ ಗೆಲ್ಲಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಕರೆ ನೀಡಿದ್ದಾರೆ.