ಕಾರು-ಬೈಕ್ ಢಿಕ್ಕಿ: ಯುವಕ ಮೃತ್ಯು
Update: 2018-05-10 18:35 IST
ಮಂಜೇಶ್ವರ,ಮೇ.10: ಕಾರು-ಬೈಕಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯುವಕ ಮೃತಪಟ್ಟು ಸಹ ಸವಾರರಾದ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಿನ್ನೆ ರಾತ್ರಿ ಪೊಸೋಟು ಪೆಟ್ರೋಲ್ ಬಂಕ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಕೆಂಪುಕಲ್ಲು ಕೋರೆಯಲ್ಲಿ ಕಲ್ಲು ಲೋಡ್ ಮಾಡುವ ಕಾರ್ಮಿಕನಾದ ಮುರತ್ತಣೆ ಅರಿಂಗುಳ ನಿವಾಸಿ ಐತ್ತಪ್ಪ ಯಾನೆ ವಸಂತ (24) ಮೃತಪಟ್ಟ ಯುವಕನಾಗಿದ್ದು, ಇವರ ಜೊತೆ ಸಂಚರಿಸುತ್ತಿದ್ದ ಮೂಲತಃ ಬೆಜ್ಜ ನಿವಾಸಿ ಪ್ರಸ್ತುತ ಬಂದ್ಯೋಡುನಲ್ಲಿ ವಾಸಿಸುವ ಅಶೋಕ್ (25), ಹೊಸಂಗಡಿ ಶಾಂತಿ ನಗರ ನಿವಾಸಿ ವಿಖ್ಯಾತ್ (22) ಗಾಯ ಗೊಂಡಿದ್ದಾರೆ.
ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪೊಲೀಸರು ಸ್ಥಳಕ್ಕೆ ತಲುಪಿದ್ದರು.ಕಾರಿನಲ್ಲಿದ್ದವರಿಗೆ ಗಾಯಗಳಾಗಿಲ್ಲ.