ಬಂಟ್ವಾಳದಲ್ಲಿ ಆದಿತ್ಯನಾಥ್ ರೋಡ್ ಶೋ
Update: 2018-05-10 19:05 IST
ಬಂಟ್ವಾಳ, ಮೇ 8: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ.ಸಿ.ರೋಡ್‍ನಲ್ಲಿ ಗುರುವಾರ ಸಂಜೆ ರೋಡ್ ಶೋ ನಡೆಸಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಪರ ಮತ ಯಾಚಿಸಿದರು.
ಕೈಕಂಬ ಪೊಳಲಿ ದ್ವಾರದಿಂದ ತೆರೆದ ವಾಹನದಲ್ಲಿ ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್‍ನ ರಾಜ ರಸ್ತೆಯಲ್ಲಿ ರೋಡ್ ಶೋ ನಡೆಸಿದ್ದು, ಜೋಡುಮಾರ್ಗ ಉದ್ಯಾವನ ಮುಂಭಾಗದ ಮೈದಾನದಲ್ಲಿ ಸಂಪನ್ನಗೊಂಡಿತು. ಇವರ ಜೊತೆಗೆ ಸಂಸದ ನಳಿನ್ ಕುಮಾರ್ ಕಟೀಲ್, ಅಭ್ಯರ್ಥಿ ರಾಜೇಶ್ ನಾಯಕ್ ಅವರು ಉಪಸ್ಥಿತರಿದ್ದು, ಮತಯಾಚನೆಗೈದರು.
ಕರಾವಳಿಯ ಚೆಂಡೆ, ಚಿಲಿಪಿಲಿ ಗೊಂಬೆ ನೃತ್ಯ, ರೋಡ್ ಶೋಗೆ ವಿಶೇಷ ಮೆರುಗು ನೀಡಿತು.ರೋಡ್ ಶೋ ಉದ್ದಕ್ಕೂ ಕಾರ್ಯಕರ್ತರು ಪ್ರಧಾನಿ ಮೋದಿ, ಯುಪಿ ಸಿಎಂ ಆದಿತ್ಯನಾಥ್ ಹಾಗೂ ಅಭ್ಯರ್ಥಿ ರಾಜೇಶ್ ನಾಯಕ್ ಪರ ಜಯಘೋಷ ಕೂಗಿದರು.