ಕಾರ್ಕಳ : ಕೃಷಿ ಪದ್ಧತಿಯಲ್ಲಿ ತರಕಾರಿ ಬೆಳೆ ತರಬೇತಿ ಕಾರ್ಯಕ್ರಮ
ಕಾರ್ಕಳ, ಮೇ 10: ಚಿಕ್ಕಮಗಳೂರು ಆರ್ಗನಿಕ್ಸ್ ಮತ್ತು ಕಾರ್ಕಳ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ತೋಟಗಾರಿಕೆ ರೈತ ಉತ್ಪಾದಕ ಕಂಪೆನಿ ನಿಯಮಿತ ವತಿಯಿಂದ ಸಾವಯವ ಕೃಷಿ ಪದ್ಧತಿಯಲ್ಲಿ ತರಕಾರಿ ಮತ್ತು ಇತರ ಬೆಳೆಗಳನ್ನು ಬೆಳೆದು ಮಾರಾಟ ಮಾಡುವ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.
ಕಂಪೆನಿಯ ಸದಸ್ಯ ರೈತರು ಹಾಗೂ ಸಾವಯವ ಕೃಷಿಯಲ್ಲಿ ಆಸಕ್ತ ರೈತರು ಭಾಗವಹಿಸಿದ್ದರು. ಚಿಕ್ಕಮಗಳೂರು ಆರ್ಗನಿಕ್ಸ್‌ನ ಮಂಜುನಾಥ ಜಿ. ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಇಲಾಖಾ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀನಿವಾಸ ಭಟ್, ಸುಧಾಕರ್, ಅನಂತ್ ಭಟ್, ಎನ್.ಆರ್. ಪೈ ಹಾಗೂ ಶ್ರೀಪತಿ ರಾವ್ ಭಾಗವಹಿಸಿದ್ದರು. ತರಬೇತಿ ಪಡೆದುಕೊಂಡ ರೈತರು ಬೆಳೆಯುವ ಬೆಳೆಗಳ ಕ್ರಿಯಾಯೋಜನೆ ತಯಾರಿಸಿದರು. ನಿರ್ದೇಶಕ ಜ್ಯೋತಿ ಕುಲಾಲ್ ಉಪಸ್ಥಿತರಿದ್ದರು.
ಕಂಪನಿಯ ನಿರ್ದೇಶಕಿ ವೀಣಾ ನಾಯಕ್ ಪ್ರಾರ್ಥಿಸಿದರು. ಕಂಪೆನಿಯ ಅಧ್ಯಕ್ಷ ಮುರಳೀಧರ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಕುಮಾರ್ ಭಟ್ ವಂದಿಸಿದರು.