ಎಸೆಸೆಲ್ಸಿ ಫಲಿತಾಂಶ: ಸನಾ ಕೌಸರ್‌ಗೆ ಶೇ. 97.28 ಅಂಕ
Update: 2018-05-10 22:05 IST
ಮಂಗಳೂರು, ಮೇ 10: ಉಡುಪಿಯ ಶಿರ್ವ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸನಾ ಕೌಸರ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 608 (ಶೇ. 97.28) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಆಕೆ ಶಿರ್ವ ಮಸೀದಿ ಬಳಿಯ ನಿವಾಸಿ, ಕೂಲಿ ಕಾರ್ಮಿಕರಾಗಿರುವ ಸಾಬ್‌ಜಾನ್ ಮತ್ತು ಝುಬೈದಾ ದಂಪತಿಯ ಪುತ್ರಿಯಾಗಿದ್ದಾರೆ.