ಅಂತಾರಾಷ್ಟ್ರೀಯ ಕರಾಟೆ: ಬರಾಖಾ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳ ಸಾಧನೆ
Update: 2018-05-10 22:11 IST
ಮಂಗಳೂರು, ಮೇ 10: ಶ್ರೀಲಂಕಾದ ಪೆರೆಡೆನಿಯಾ ವಿವಿಯಲ್ಲಿ ಮೇ 6ರಂದು ನಡೆದ 16ನೇ ತೆನ್‌ಶಿನ್‌ಕಪ್ ಅಂತರಾಷ್ಟ್ರೀಯ ಕರಾಟೆ ಟೂರ್ನಿಯಲ್ಲಿ ಮಂಗಳೂರಿನ ಬರಾಖಾ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಮುಹಮ್ಮದ್ ಶಯಾನ್ ಕಟಾ ಸ್ಪರ್ಧೆಯಲ್ಲಿ ಚಿನ್ನ, ಕುಮಿಟೆ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, ಮುಹಮ್ಮದ್ ಅಮನ್ ಕುಮಿಟೆಯಲ್ಲಿ ಚಿನ್ನ, ಕಟಾದಲ್ಲಿ ಬೆಳ್ಳಿ, ಮುಹಮ್ಮದ್ ಶರೀಫ್ ಕುಮಿಟೆಯಲ್ಲಿ ಚಿನ್ನ ಮತ್ತು ಕಟಾದಲ್ಲಿ ಕಂಚಿನ ಪದಕ, ಅಬ್ದುಲ್ ಖಾದರ್ ಸುಹಾನ್ ಕಟಾ ಮತ್ತು ಕುಮಿಟೆಯಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಇವರಿಗೆ ನದೀಮ್ ತರಬೇತಿ ನೀಡಿದ್ದರು.