ಮಾರ್ನಮಿಕಟ್ಟೆ: ‘ಮ್ಯಾಂಗೋ ಬೆರಿಸ್’ ಶುಭಾರಂಭ
ಮಂಗಳೂರು, ಮೇ 10: ನಗರದ ಮಾರ್ನಮಿಕಟ್ಟೆ ಮೋರ್ಗನ್ಸ್‌ಗೇಟ್ ರಸ್ತೆಯಲ್ಲಿನ ಎಚ್.ಎಚ್.ಡೈಮಂಡ್ ಸಿಟಿ ಸಂಕೀರ್ಣದ ನೆಲ ಅಂತಸ್ತಿನಲ್ಲಿ ನೂತನ ‘ಮ್ಯಾಂಗೋ ಬೆರಿಸ್’ ಗುರುವಾರ ಶುಭಾರಂಭಗೊಂಡಿತು.
ಚಿತ್ರನಟಿ ಚಿರಶ್ರೀ ಅಂಚನ್ ಮತ್ತು ಕೆ.ಎಂ.ಸಿ. ಪ್ರೊಫೆಸರ್ ಡಾ.ಮುಹಮ್ಮದ್ ಇಸ್ಮಾಯೀಲ್ ನೂತನ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಇರ್ಶಾದ್, ಮುಹಮ್ಮದ್, ಮಾಸ್ ಫರ್ನಿಚರ್ ಆ್ಯಂಡ್ ಇಂಟೀರಿಯರ್‌ನ ನಿರ್ದೇಶಕ ಮುಹಮ್ಮದ್ ಅಶ್ರಫ್, ಆಝಾದ್ ಗ್ರೂಪ್ ಆಫ್ ಕಂಪೆನೀಸ್‌ನ ನಿರ್ದೇಶಕ ಮನ್ಸೂರ್ ಅಹ್ಮದ್, ಫಾಝಿಲ್ಸ್ ಕ್ರಿಯೇಶನ್ಸ್‌ನ ಸಿಇಒ ಮೂಸಾ ಫಾಝಿಲ್ ಉಪಸ್ಥಿತರಿದ್ದರು.
ವಿವಿಧ ಬಗೆಯ ಐಸ್ ಕ್ರೀಮ್‌ಗಳು, ತಾಜಾ ಜ್ಯೂಸ್‌ಗಳು ಲಭ್ಯವಿದೆ. ಫ್ರೆಸ್ ಮತ್ತು ನ್ಯಾಚುರಲ್ (ರಾಸಾಯನಿಕ ಬಳಕೆ ಇಲ್ಲದ) ಐಸ್ ಕ್ರೀಮ್, ಮಿಲ್ಕ್ ಶೇಕ್ ಜ್ಯೂಸ್‌ಗಳು ಮ್ಯಾಂಗೋ ಬೆರಿಸ್‌ನಲ್ಲಿ ಲಭ್ಯ ಇದೆ. ‘ಮ್ಯಾಂಗೋ ಬೆರಿಸ್’ ಉತ್ಪನ್ನಗಳು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದ್ದು, ಮಂಗಳೂರಿನಲ್ಲಿ 10ನೆ ಮಳಿಗೆಯಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.