ಚುನಾವಣೆ: ಕಾಪು, ಕುಂದಾಪುರದಲ್ಲಿ ಮತದಾರರ ಎಡಗೈಯ ನಡು ಬೆರಳಿಗೆ ಶಾಯಿ
Update: 2018-05-10 23:24 IST
ಉಡುಪಿ, ಮೇ 10: ಶನಿವಾರ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಉಡುಪಿ ಜಿಲ್ಲೆ 119.ಕುಂದಾಪುರ ವಿಧಾನಸಭಾ ಕ್ಷೇತ್ರ, 121 ಕಾಪು ವಿಧಾನಸಭಾ ಕ್ಷೇತ್ರ ಹಾಗೂ ಹಾಸನ ಜಿಲ್ಲೆಯ 199. ಸಕಲೇಶಪುರ ವಿಧಾನಸಭಾ ಕ್ಷೇತ್ರದ ಮತದಾರರ ಎಡಗೈ ನಡು ಬೆರಳಿಗೆ ಶಾಯಿಯನ್ನು ಹಾಕಲು ರಾಜ್ಯ ಮುಖ್ಯ ಚುನಾವಣಾಧಿಕಾರಿಯವರು ಸೂಚನೆಗಳನ್ನು ಕಳುಹಿಸಿದ್ದಾರೆ.
ಈ ಮೂರು ಕ್ಷೇತ್ರಗಳಲ್ಲೂ ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆ ವೇಳೆ ಹಾಕಿರುವ ಶಾಯಿ ಇನ್ನೂ ಅಳಿಸಿ ಹೋಗದೇ ಇರುವ ಕಾರಣ ಜಿಲ್ಲಾ ಚುನಾವಣಾಧಿಕಾರಿಗಳ ಕೋರಿಕೆಯಂತೆ ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.