×
Ad

ಸಂಜೀವ ಪೂಜಾರಿ ಮೇಲೆ ಹಲ್ಲೆಗೆ ಖಂಡನೆ: ದ.ಕ. ಜಿಲ್ಲಾ ಕಾಂಗ್ರೆಸ್

Update: 2018-05-11 14:04 IST

ಮಂಗಳೂರು, ಮೇ 11: ಬಂಟ್ವಾಳ ತಾಲ್ಲೂಕು ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ ಇವರ ಮೇಲೆ ಬಿಜೆಪಿ ಬಾಡಿಗೆ ಗೂಂಡಾಗಳು ಹಲ್ಲೆ ಮಾಡಿರುವುದು ಖಂಡನೀಯ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಹೇಳಿದೆ.

ಪತ್ರಿಕಾ ಪ್ರಕಟನೆಯಲ್ಲಿ ಖಂಡನೆ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ರಾತ್ರಿ ಮನೆಗೆ ನುಗ್ಗಿ ಅವರ  ಪತ್ನಿ ಮತ್ತು ಮಕ್ಕಳ ಮೇಲೆ ಕೂಡಾ ಹಲ್ಲೆ ನಡೆಸಿ ಕೊಲೆಯತ್ನ ಮಾಡಲಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಕೋಟಿ ಚೆನ್ನಯ್ಯರ ಭಾವಚಿತ್ರ ಹಾಕಿ ಮತ ಯಾಚಿಸುವ ಬಿಜೆಪಿಯವರು ನಾರಾಯಣ ಗುರುಗಳ ಮಂದಿರದ ನಿರ್ಮಾತೃ ಗುರುಗಳ ಕಟ್ಟಾ ಅನುಯಾಯಿಯವರ ಮೇಲೆ ಹಲ್ಲೆ ನಡೆಸಿರುವುದು ಇವರು ಗುರುಗಳಿಗೆ ನೀಡಿದ ಕಾಣಿಕೆಯೇ ? ಎಂದು ಪ್ರಶ್ನಿಸಿದ್ದಾರೆ.

ರಮಾನಾಥ ರೈಯವರ ಜನಪ್ರಿಯತೆ ಸಹಿಸದೆ, ರೈ ಯವರ ಗೆಲುವು ನಿಶ್ಚಿತವೆಂದು ಅರಿತ ಬಿಜೆಪಿ ಗೂಂಡಾಗಳು ನಡೆಸಿರುವ ದೌರ್ಜನ್ಯ ಮತ್ತು ಬಿಜೆಪಿ ರಾಜಕೀಯ ಈ ಮಟ್ಟಕ್ಕೆ ಇಳಿದಿರುವುದು ತೀರಾ ಬೇಸರ ತರಿಸಿದೆ. ಇದು ಮೋದಿ-ಶಾ-ಯೋಗಿಯವರ ರಾಜಕೀಯ ಮೀರದ ಸಾರಾಂಶ ಇರಬಹುದೇ, ಎಂದು ಶಂಕೆ ಮೂಡಿದೆ. ಈ ಕೃತ್ಯ ನಡೆಸಿದವರಿಗೆ ಇಲಾಖೆ ಚುನಾವಣಾ ಆಯೋಗ ಸೂಕ್ತ ಕ್ರಮಕೈಗೊಳ್ಳೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News