ಮೋದಿ ನಿಮ್ಮನ್ನು ನಾವು ಸ್ವಾಗತಿಸುವುದಿಲ್ಲ: ಪ್ರಧಾನಿ ವಿರುದ್ಧ ನೇಪಾಳಿಗರ ಆಕ್ರೋಶ

Update: 2018-05-11 10:29 GMT

ಕಾಠ್ಮಂಡು, ಮೇ 11: ಪ್ರಧಾನಿ ನರೇಂದ್ರ ಮೋದಿಯವರು ಇಂದು ನೇಪಾಳಕ್ಕೆ ತೆರಳಿದ್ದು, ನೇಪಾಳದ ಪ್ರಜೆಗಳು ಅವರನ್ನು ಪ್ರತಿಭಟನೆಯ ಮೂಲಕ ಸ್ವಾಗತಿಸಿದರು. 2015ರ ಗಡಿ ದಿಗ್ಬಂಧನ ಕುರಿತಂತೆ ನೇಪಾಳಿಗರು ಮೋದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆಗಳನ್ನು ನಡೆಸಿದರು.

#BlockadeWasCrimeMrModi ಹಾಗು #ModiNotWelcomed ಎನ್ನುವ ಹ್ಯಾಶ್ ಟ್ಯಾಗ್ ನೇಪಾಳದಲ್ಲಿ ಟ್ರೆಂಡ್ ಆಗುತ್ತಿದೆ. 2015ರ ಭೂಕಂಪದ ನಂತರ ನೇಪಾಳ ಸಂಕಷ್ಟದಲ್ಲಿದ್ದಾಗ ಭಾರತ ಗಡಿ ದಿಗ್ಬಂಧನ ವಿಧಿಸಿತ್ತು ಎಂದು ಹಲವರು ಟ್ವೀಟ್ ಮಾಡಿದ್ದಾರೆ.

2015ರ ಸೆಪ್ಟಂಬರ್ ನಿಂದ 2016ರ ಫೆಬ್ರವರಿಯವರೆಗಿನ ದಿಗ್ಬಂಧನಕ್ಕಾಗಿ ಮೋದಿ ಕ್ಷಮೆ ಕೋರಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ. “ಮೋದಿ ಕ್ಷಮಿಸಿ ನಾವು ದಿಗ್ಬಂಧನವನ್ನು ಮರೆತಿಲ್ಲ. ನಿಮ್ಮನ್ನು ನಾವು ಸ್ವಾಗತಿಸುತ್ತಿಲ್ಲ. ಆದರೆ ನಾವು ಭಾರತ ವಿರೋಧಿಗಳೆಂದು ಇದರ ಅರ್ಥವಲ್ಲ. ನಾವು ಭಾರತದ ಜನರೊಂದಿಗೆ ಇದ್ದೇವೆ ಆದರೆ ಭಾರತ ಸರಕಾರದ ಗಡಿ ದಿಗ್ಬಂಧನ ಕ್ರಮವನ್ನು ವಿರೋಧಿಸುತ್ತೇವೆ” ಎಂದು ನೇಪಾಳದ ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

“ಮಿ. ಮೋದಿ ನೇಪಾಳಿ ರಾಜಕಾರಣಿಗಳು ನಿಮ್ಮನ್ನು ಸ್ವಾಗತಿಸಬಹುದು. ಆದರೆ ನೇಪಾಳಿ ಜನರು ನಿಮ್ಮನ್ನು ಸ್ವಾಗತಿಸುವುದಿಲ್ಲ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News