ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನದ ಲಕ್ಕಿ ಡ್ರಾ
ಉಡುಪಿ, ಮೇ 11: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಮಳಿಗೆಯಲ್ಲಿ ಇಂದು ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನ ಸೀಸನ್ 6ರ ಉಚಿತ ಹನಿಮೂನ್ ಟ್ರಿಪ್‌ನ ಮೊದಲ ಸುತ್ತಿನ ಲಕ್ಕಿ ಡ್ರಾ ನಡೆಯಿತು.
ಉದ್ಯಮಿ ದಿವ್ಯಾ ಪ್ರಕಾಶ್ ನಾಯಕ್ ಅದೃಷ್ಟ ಚೀಟಿ ಎತ್ತುವ ಮೂಲಕ ವಿಜೇತರನ್ನು ಆಯ್ಕೆ ಮಾಡಿದರು. ಬೆಳಪು ಜವನರಕಟ್ಟೆಯ ಶಂಶಾದ್ ಅವರಿಗೆ ಸಿಂಗಪೂರ್ ದೇಶಕ್ಕೆ ಉಚಿತ ಹನಿಮೂನ್ ಟ್ರಿಪ್ ತೆರಳುವ ಅವಕಾಶ ದೊರೆತಿದೆ. ಈ ಸಂದರ್ಭದಲ್ಲಿ ಪ್ರಕಾಶ್ ನಾಯಕ್, ಮಲಬಾರ್ ಗೋಲ್ಡ್‌ನ ಉಡುಪಿ ಮಳಿಗೆ ಮುಖ್ಯಸ್ಥ ಹಫೀಝ್ ರೆಹಮಾನ್ ಉಪಸ್ಥಿತರಿದ್ದರು. ಪ್ರಭಾಕರ ಕಾನ ಕಾರ್ಯಕ್ರಮ ನಿರೂಪಿಸಿದರು.
ಅದೃಷ್ಟ ಜೋಡಿಗಳು ದುಬೈ/ಮಲೇಷಿಯಾ/ಸಿಂಗಪೂರ್/ ಬಾಲಿ ಅಥವಾ ಹಾಂಗ್‌ಕಾಂಗ್‌ಗೆ ಉಚಿತ ಹನಿಮೂನ್ ಟ್ರಿಪ್‌ಗಾಗಿ ಅವಕಾಶ ಪಡೆಯಲಿದ್ದು, ಭಾರತದಾದ್ಯಂತ ಮೊದಲ ಸುತ್ತಿನ ಲಕ್ಕಿ ಡ್ರಾದಲ್ಲಿ ಉಡುಪಿ ಸೇರಿದಂತೆ ಒಟ್ಟು 175 ಮಂದಿಯನ್ನು ವಿಜೇತರಾಗಿ ಘೋಷಿಸಲಾಗಿದೆ. ಈ ಕೊಡುಗೆಯು ಸೆಪ್ಟೆಂಬರ್ ತಿಂಗಳ ಕೊನೆಯವರೆಗೆ ಭಾರತದಾದ್ಯಂತ ಮಲಬಾರ್ ಗೊಲ್ಡ್ ಆ್ಯಂಡ್ ಡೈಮಂಡ್ಸ್ ಶೋರೂಂಗಳಿಂದ 3ಲಕ್ಷಕ್ಕೂ ಅಧಿಕ ವಿವಾಹದ ಆಭರಣಗಳನ್ನು ಖರೀದಿಸುವ ಹಾಗೂ ನವೆಂಬರ್ 30 ರೊಳಗಾಗಿ ವಿವಾಹವಾದ ನವವಿವಾಹಿತ ಜೋಡಿಗೆ ಲಭ್ಯವಿದ್ದು, ಉಡುಪಿ ಮಳಿಗೆಯಲ್ಲಿ ಪ್ರತಿ ತಿಂಗಳ ಲಕ್ಕಿ ಡ್ರಾದಲ್ಲಿ ಒಟ್ಟು ಎಂಟು ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ.