ಬಿಗಿ ಭದ್ರತೆಯಲ್ಲಿ ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿಗಳು
ಉಡುಪಿ, ಮೇ 11: ರಾಜ್ಯ ವಿಧಾನಸಬಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಇಂದು ಮಸ್ಟರಿಂಗ್ ನಡೆದಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿಲಾದ ಸಿಬ್ಬಂದಿಗಳು ಮತಯಂತ್ರಗಳ ಜೊತೆ ಬಿಗಿ ಭದ್ರತೆಯಲ್ಲಿ ಆಯಾ ಮತಗಟ್ಟೆಗಳಿಗೆ ತೆರಳಿದರು.
ಉಡುಪಿ ಸೈಂಟ್ ಸಿಸಿಲೀಸ್ ಶಾಲೆಯ ಮಸ್ಟರಿಂಗ್ ಕೇಂದ್ರದಲ್ಲಿ ಉಡುಪಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರ, ಕುಂದಾಪುರ ಭಂಡಾರ್ಕರ್ ಕಾಲೇಜಿನ ಮಸ್ಟರಿಂಗ್ ಕೇಂದ್ರದಲ್ಲಿ ಕುಂದಾಪುರ ಹಾಗೂ ಬೈಂದೂರು ಕ್ಷೇತ್ರ, ಕಾರ್ಕಳ ಮಂಜುನಾಥ್ ಪೈ ಸಭಾಂಗಣದ ಕೇಂದ್ರದಲ್ಲಿ ಕಾರ್ಕಳ ಕ್ಷೇತ್ರ ವ್ಯಾಪ್ತಿಯ ಚುನಾ ವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ ಯಂತ್ರ ಮತ್ತು ಅಗತ್ಯ ಚುನಾವಣಾ ಸಾಮಗ್ರಿಗಳೊಂದಿಗೆ ತಮಗೆ ನಿಗದಿ ಪಡಿಸಿದ ಮತಗಟ್ಟೆಗಳಿಗೆ ತೆರಳಿದರು.
ಮತಗಟ್ಟೆಗಳಿಗೆ ತೆರಳಲು ಸಿಬ್ಬಂದಿಗಳಿಗೆ ಮತ್ತು ಮತಗಟ್ಟೆ ಭದ್ರತೆ ಒದಗಿ ಸುವ ಅರೆಸೇನಾ ಪಡೆ ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ನಾಳೆ ಸಂಜೆ ಇದೇ ಕೇಂದ್ರದಲ್ಲಿ ಆಯಾ ಕ್ಷೇತ್ರಗಳ ಡಿಮಸ್ಟ ರಿಂಗ್ ಕಾರ್ಯ ನಡೆಯಲಿದ್ದು, ಬಳಿಕ ಮೂರು ಕೇಂದ್ರಗಳಿಂದ ಮತ ಯಂತ್ರ ಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಉಡುಪಿಯ ಮತ ಎಣಿಕೆ ಕೇಂದ್ರವಾಗಿ ರುವ ಕುಂಜಿಬೆಟ್ಟು ಟಿ.ಎಂ.ಎ.ಪೈ ಶಾಲೆಗೆ ತರಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.