×
Ad

ಬಂಟ್ವಾಳ: ಸಂಜೀವ ಪೂಜಾರಿ ವಿರುದ್ಧ ದೂರು ದಾಖಲು

Update: 2018-05-11 21:34 IST

ಬಂಟ್ವಾಳ, ಮೇ 11: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಬೊಳ್ಳಾಯಿ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಬಬಿತಾ, ಜ್ಯೋತಿ ಆಳ್ವ ಮತ್ತು ಕಮಲಾ ಎಂಬವರು ದೂರು ನೀಡಿದ್ದಾರೆ. ಅವುಗಳ ಪೈಕಿ ಒಂದು ಜಾತಿನಿಂದನೆ ಪ್ರಕರಣವೂ ಸೇರಿದೆ.

ಪ್ರತ್ಯೇಕ ಪ್ರಕರಣ: ಗುರುವಾರ ರಾತ್ರಿ ಸಂಜೀವ ಪೂಜಾರಿ ಹಾಗೂ ಮತ್ತಿತರರು ಮಾರಕಾಸ್ತ್ರಗಳೊಂದಿಗೆ ಕಾರಿನಲ್ಲಿ ಮಿತ್ತಮಜಲು ಅಂಗನವಾಡಿ ಬಳಿ ಬಂದು ತನ್ನನ್ನು ಅಪಮಾನಿಸಿದ್ದಲ್ಲದೆ, ದರೋಡೆಗೆ ಯತ್ನಿಸಿದ್ದಾರೆ ಎಂದು ಬಬಿತಾ ಎಂಬವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಎರಡನೆ ಪ್ರಕರಣದಲ್ಲಿ ಗುರುವಾರ ರಾತ್ರಿ 11.20ಕ್ಕೆ ಸಂಜೀವ ಪೂಜಾರಿ ಹಾಗೂ ಮತ್ತಿತರರು ಮಾರಕಾಯುಧ ಹಿಡಿದು ಮಿತ್ತಮಜಲಿನಲ್ಲಿರುವ ತನ್ನ ಮನೆಗೆ ಬಂದು ಬೈದು, ಬೆದರಿಸಿದ್ದಾರೆ ಎಂದು ಜ್ಯೋತಿ ಆಳ್ವ ಎಂಬವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸಂಜೀವ ಪೂಜಾರಿ ಮತ್ತಿತರರು ಜಾತಿನಿಂದನೆ ಮಾಡಿದ್ದಾರೆ ಎಂದು ಕಮಲಾ ಎಂಬವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಮೂರು ಘಟನೆಗಳು ಸಂಜೀವ ಪೂಜಾರಿ ಮೇಲೆ ಹಲ್ಲೆ ಘಟನೆ ನಡೆಯುವ ಮೊದಲು ನಡೆದಿರುವ ಕುರಿತು ದೂರುಗಳು ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News